ಕುಶಾಲನಗರ, ಅ 14: ಮುಂಜಾನೆಯಿಂದ ಸುರಿಯುತ್ತಲೇ ಬಿಡುವು ನೀಡಲೊಲ್ಲದ ಮಳೆ ಆಲದ ಮರದಡಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಮರದ ಮುಂಭಾಗದಲ್ಲಿದ್ದ ಕಮಲರಾಜನ ಮನೆಯ ಮಹಡಿಗೆ ವರ್ಗಾವಣೆ ಮಾಡುವ ಅನಿವಾರ್ಯವಾಯಿತು ಆಗಮಿಸಬೇಕಿದ್ದ ಸಾಹಿತ್ಯಾಸಕ್ತರು ಮಳೆಯ ಕಾರಣವನ್ನೊಡ್ಡಿ ಹಿಂದೇಟು ಹಾಕಿದರು.ಕೆಲವು ಸಹೃದಯಿಗಳು ಬರಲೂ ಆರಂಭಿಸಿದರು ಅಂತೂ ಇಂತೂ ತುಂಬಾ ತಡವಾಗಿಯೇ ಕಾರ್ಯಕ್ರಮ ಆರಂಭವಾಯಿತು ಸುರಿವ ಮಳೆ ಸುಯ್ಯ್ ಗುಡುವ ಗಾಳಿ ಮಳೆ ಹನಿಯ ಸಿಂಚನದ ನಡುವೆ ಸಂಧ್ಯಾ ಸಮದಲ್ಲಿ ಮಹಡಿಗೆ ಹೊದಿಸಿದ ಮೇಲ್ಚಾವಣಿಯ ಅಡಿಯಲ್ಲಿ ಆರಂಭವಾಗಿಯೇ ಬಿಟ್ಟಿತು ಕುಶಾಲನಗರ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಕೂಟ ಇವರ ವತಿಯಿಂದ ಆಚರಿಸಿದ ಖ್ಯಾತ ಸಾಹಿತಿ ಶಿವರಾಂ ಕಾರಂತರ ಜನ್ಮದಿನಾಚರಣೆ.
ದಿನದ ವಿಶೇಷತೆಯ ಬಗ್ಗೆ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ ಸುನೀಲ್ ಮಾತನಾಡಿದರು ಕಾರಂತರು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾದವರಲ್ಲ ಅವರು ಆಡುಮುಟ್ಟದ ಸೊಪ್ಪಿಲ್ಲ ವೆಂಬಂತೆ ಬಹುಮುಖ ವ್ಯಕ್ತಿತ್ವವುಳ್ಳ ಕಾದಂಬರಿ.ಯಕ್ಷಗಾನ ಪ್ರಯೋಗಶೀಲ.ಪರಿಸರ .ಸಾಹಿತ್ಯದ ಜೊತೆಗೆ ಕಲೆ.ವಿಜ್ಞಾನ.ಮಕ್ಕಳ ಸಾಹಿತ್ಯದ ಬಗ್ಗೆಯೂ ಕೈಯಾಡಿಸಿದ ಬಹುಮುಖ ಪ್ರತಿಭಾವಂತರೆಂದು ಸಾಬೀತು ಪಡಿಸಿಕ್ಕೊಂಡವರು.ಆದ್ದರಿಂದ ಸರಕಾರ ಕಾರಂತರ ಜನುಮ ದಿನವನ್ನು ಬಹುಮುಖಿ ದಿನವನ್ನಾಗಿ ಆಚರಿಸಬೇಕು ಎಂದು ಅಭಿಪ್ರಾಯಪಟ್ಟರು.
ಖ್ಯಾತ ಸಾಹಿತಿ ಆರ್.ಕೆ.ಬಾಲಚಂದ್ರ ಮಾತನಾಡಿ
ಕೈಗಾ ವಿದ್ಯುತ್ ಸ್ಥಾವರವನ್ನು ನೇರವಾಗಿ ವಿರೋಧಿಸಿದವರು ಮಕ್ಕಳಿಗಾಗಿ ಸಾಹಿತ್ಯ ರಚಿಸಿದ ಕಾರಂತರು ಕಾರಂತಜ್ಜ ಎಂದೇ ಖ್ಯಾತರಾದರು ವಿಜ್ಞಾನದ ಅನೇಕ ಮುಖಗಳನ್ನು ಮಕ್ಕಳಿಗೆ ಪರಿಚಯಿಸಲು ಅವರು ಬರೆದ ಅದ್ಭುತ ಜಗತ್ತು.ಬಾಲಪ್ರಪಂಚ ಕೃತಿಗಳು ಕನ್ನಡದ ಮಟ್ಟಿಗೆ ಅದ್ಭುತ ಏಕವ್ಯಕ್ತಿ ಜ್ಞಾನ ಕೋಶ ಎನಿಸಿದವು ಎಂದ ಅವರು ಕಾರಂತರ ಜೊತೆ ಇದ್ದ ಒಡನಾಟದ ಬಗ್ಗೆ ಸಭೆಯ ಮುಂದಿಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ ಕಣಿವೆ ಭಾರಾದ್ವಾಜ್ ಆನಂದತೀರ್ಥ ಮಾತನಾಡಿ ಕಾರಂತರು ಬಹುಮುಖ ಪ್ರತಿಭೆಯುಳ್ಳವರಾಗಿದ್ದು ಇಂತಹ ಸಾಹಿತಿಗಳ ಕೃತಿಗಳ ಬಗ್ಗೆ ಒಂದಿಷ್ಟು ಚರ್ಚೆಯಾಗಬೇಕು ಚರ್ಚೆಯಲ್ಲಿ ಜನಸಾಮಾನ್ಯರು ಭಾಗಿಯಾಗುವುದರ ಮೂಲಕ ವಿಚಾರ ವಿನಿಮಯವಾಗಬೇಕು ಸಾಹಿತ್ಯ ಮತ್ತು ಸಾಂಸ್ಕ್ರತಿಕ ಕೂಟದ ಇಂತಹ ಪ್ರಯತ್ನ ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದಲ್ಲಿ ಚಿಂತಕ ವಿ.ಪಿ.ಶಶಿಧರ್ ಮಾತನಾಡಿ ಕಾರಂತರ ಪ್ರತಿ ಬರಹಗಳು ಮತ್ತು ಅವರ ಬದುಕು ಆದರ್ಶಪ್ರಾಯವಾಗಿದ್ದವು ಎಂದ ಅವರು ಶುಭಹಾರೈಸಿದರು.ಶಿಕ್ಷಕ
ವೆಂಕಟ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿವರಾಂ ಕಾರಂತರ ಜೀವನ ಮತ್ತು ಕೃತಿಗಳ ಬಗ್ಗೆ ಸಭೆಗೆ ತಿಳಿಸಿ ಸರ್ವರನ್ನೂ ಸ್ವಾಗತಿಸಿದ್ದು ವಿಶೇಷವಾಗಿತ್ತು.ಈ ಸಂದರ್ಭ ಆರ್ ಕೆ.ಲೇ.ಔಟ್ ನ ಅಶ್ವತ್ಥಾಲಯ ಟ್ರಸ್ಟ್ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಇಂತಹ ಸಾಹಿತಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ವಾಗಿದ್ದು ಮುಂದೆಯೂ ಇಂತಹ ಕಾರ್ಯಕ್ರಮಗಳಿಗೆ ಸಹಕರಿಸುವುದಾಗಿ ತಿಳಿಸಿದರು.ಯುವಕ ಕಮಲ್ ಚಾಟ್ಸ್ ಮಾಲೀಕ
ಕಮಲ್ ರಾಜ್ ತಾಪ ರವರು ವಾಚಿಸಿದ ‘ತಾಯಿ’ ಕವನ ನೆರೆದಿದ್ದವರ ಮನಗೆದ್ದಿತು ಕಲಾವಿದ ಸತೀಶ್ ರವರ ಗೀತಗಾಯನ ಎಲ್ಲರ ಮನಸೂರೆ ಗೊಂಡಿತು.ಕಾರ್ಯಕ್ರಮಕ್ಕೆ ಆಗಮಿಸಿದ ಸಹೃದಯರಿಗೆ ಹೊಗೆಯಾಡುತ್ತಿದ್ದ ಉಪ್ಪಿಟ್ಟು ಜೊತೆಗೊಂದಿಷ್ಟು ಚಹಾ ನೀಡಿದ್ದು ಬಂದವರ ಉದರಕ್ಕೆ ಪುಷ್ಟಿ ನೀಡುವಂತಿದ್ದರೇ ಬಂದ ಅತಿಥಿಗಳಿಗೆ ಕೇಸರಿ ಬಾತ್ ನೀಡುವುದರ ಮೂಲಕ ಅದರ ಮತ್ತು ಉದರವನ್ನು ಸಂತೈಸಿದ ಕೀರ್ತಿ ಕಮಲನಿಗೆ ಸಲ್ಲಬೇಕು ನಿಮ್ಮ ಆತೀಥ್ಯಕ್ಕೆ ಮನಸೋತು ನಮ್ಮ ಕೂಟ ಧನ್ಯವಾದಗಳನ್ನರ್ಪಿಸುತ್ತದೆ
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು.ಸದಸ್ಯೆ ಜಯಲಕ್ಷ್ಮಮ್ಮನಂಜುಂಡಸ್ವಾಮಿ.ಪ್ರಾಚಾರ್ಯ ಲಿಂಗಮೂರ್ತಿ.ಬರಹಗಾರ ಕೆ.ಜಿ.ಮನು.ವಿಜ್ಞಾನ ಪರಿಷತ್ತಿನ ಪ್ರಮುಖರೂ ಹಾಗೂ ಶಿಕ್ಷಕ ಪ್ರೇಮ್ ಕುಮಾರ್.ಕರವೇ.ರಾಜ್ಯ ಸಂಚಾಲಕಿ ದೀಪಾಪೂಜಾರಿ.
ಕರವೇ ಕುಶಾಲನಗರ ತಾಲೂಕು ಮಹಿಳಾ ಅಧ್ಯಕ್ಷೆ ರೂಪಾ ಗಣೇಶ್.ಪ್ರಮುಖರಾದ ಮೊಗಣ್ಣೇಗೌಡ.ಮೀನ್ ಬಹುದ್ದೂರ್ ತಾಪ.ಪ್ರಭುದೇವ್.
ಕೃಷ್ಣಪ್ಪ.ಸುನೀಲ್ ಪೊನ್ನೇಟಿ.ಜಯಪ್ರಕಾಶ್.ಉಮೇಶ್ .ಕೆ.ಎಸ್ .ಮೂರ್ತಿ.ಸಾಹಿತ್ಯ ಮತ್ತು ಸಾಂಸ್ಕ್ರತಿಕ ಕೂಟಾದ ಸಂಯೋಜಕ ನಂಜುಂಡಸ್ವಾಮಿ.ಅಶ್ವತ್ಥಾಲಯ ಟ್ರಸ್ಟ್ ನ ನಿರ್ದೇಶಕರು ಸದಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.
Back to top button
error: Content is protected !!