ಕುಶಾಲನಗರ, ಸೆ 21: ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕುಶಾಲನಗರ ದುಬಾರೆಯ ಶಿಬಿರದಿಂದ ತೆರಳಿರುವ ಸಾಕಾನೆಗಳಾದ ಧನಂಜಯ ಹಾಗೂ ಕಂಜನ್ ಎಂಬ ಆನೆಗಳ ಶೆಡ್ ನಿಂದ ಹೊರಗೋಡಿ ಬಂದ ಪರಿ ಕೆಲಕಾಲ ಭೀತಿ ಉಂಟುಮಾಡಿತು.
ಗೇಟ್ ದೂಡಿಕೊಂಡು ರಸ್ತೆಯತ್ತ ಓಡಿದ ಆನೆಗಳು ಬೀದಿ ಬದಿ ತಳ್ಳುಗಾಡಿಗಳನ್ನು ತಳ್ಳಿಕೊಂಡು ರಸ್ತೆಗೆ ಇಳಿದ ಕಾರಣ ಅಲ್ಲಿದ್ದವರಲ್ಲಿ ಭೀತಿ ಸೃಷ್ಟಿಸಿತು.
ಶುಕ್ರವಾರ ತಡರಾತ್ರಿ ನೇರವಾಗಿ ಮೊದಲು ಕಂಜನ್ ಆನೆ ಅರಮನೆ ಮುಂಭಾಗದ ಗೇಟ್ ಅನ್ನು ತಳ್ಳಿಕೊಂಡು ರಸ್ತೆಗೆ ಮುನ್ನುಗಿದ ಘಟನೆ ನಡೆದಿದೆ. ಇದೇ ಸಂದರ್ಭ ಇದರ ಹಿಂದೆ ಧನಂಜಯ ಆನೆ ಕೂಡ ರಸ್ತೆಗೆ ಆಗಮಿಸಿದ ಘಟನೆ ನಡೆದಿದೆ. ಜಯ ಮಾರ್ತಾಂಡ ದ್ವಾರದ ಮೂಲಕ ಆನೆಗಳು ಹೊರಬಂದು ಕೆಲವು ಕ್ಷಣ ಆತಂಕಕ್ಕೆ ಎಡೆ ಮಾಡಿಕೊಟ್ಟಿತು. ಮಾವುತ ಹಾಗೂ ಕಾವಾಡಿಗಳು ಓಡೋಡಿ ಬಂದು ಆನೆಗಳನ್ನು ಹತೋಟಿಗೆ ತಂದು ಮತ್ತೆ ಪುನಃ ಅರಮನೆ ಆವರಣದ ಕೊಡಿ ಸೋಮೇಶ್ವರ ದೇವಸ್ಥಾನದ ಸಮೀಪ ಆನೆಗಳನ್ನು ಕಟ್ಟಿ ಹಾಕಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ವರದಿಯಾಗಿದೆ.
Back to top button
error: Content is protected !!