ಟ್ರೆಂಡಿಂಗ್
ಕುಶಾಲನಗರದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನಾಚರಣೆ
ಶಾದಿಮಹಲ್‌ನಲ್ಲಿ ನಡೆದ ಶಪಾಪಾತೇ ಆಲಂ ಮಿಲಾದ್ ಕಾರ್ಯಕ್ರಮ
ಕುಶಾಲನಗರ, ಸೆ 16: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ೧೪೯೯ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ “ಶಪಾಪಾತೇ ಆಲಂ ಮಿಲಾದ್ ಕಾರ್ಯಕ್ರಮ” ವು ಕುಶಾಲನಗರದ ಶಾಧಿ ಮಹಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾದ ನಾಸಿರ್ ಫೈಜ಼ಿರವರು ಮಾತನಾಡಿ, ಪ್ರವಾದಿಯವರ ಆದರ್ಶಗಳನ್ನು ಹಾಗೂ ಸಂದೇಶವನ್ನು ಸಾರಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಧಾರ್ಮಿಕ ವಿದ್ಯಾಭ್ಯಾಸದೊಂದಿಗೆ ಭೌದ್ಧಿಕ ವಿದ್ಯಾಭ್ಯಾಸ ಮುಖ್ಯ. ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಸಮುದಾಯದ ಹಿರಿಮೆಯನ್ನು ಹೆಚ್ಚಿಸಬೇಕು ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಜಗತ್ತಿನ ಅತ್ಯಂತ ಎರಡನೇ ದೊಡ್ಡ ರಾಷ್ಟ್ರ ಭಾರತವಾಗಿದೆ. ವಿಶ್ಬಾದ್ಯಂತ ಪ್ರವಾದಿಯವರ ಸಂದೇಶವನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚುತ್ತಿದ್ದು, ಪ್ರವಾದಿಯವರ ಜೀವನ ಸಂದೇಶವನ್ನು ಅಳವಡಿಸಿಕೊಂಡಿರುವ ಭಾರತೀಯ ಮುಸಲ್ಮಾನರು ಅತ್ಯಂತ ಅನ್ಯೋನ್ಯತೆಯಿಂದ ಜೀವಿಸುತ್ತಿದ್ದಾರೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಜೈವರ್ಧನ್,
ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಮಾತನಾಡಿದರು.
ಸ್ವಾಗತ ಭಾಷಣ ಮಾಡಿದ ದಾರುಲ್ ಉಲೂಂ ಮದ್ರಸದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಹಿಲಾಲ್ ಮಸೀದಿ ಹಾಗೂ ದಾರುಲ್ ಉಲೂಂ ಮದ್ರಸಕ್ಕೆ ಸಂಬಂಧಿಸಿದಂತೆ ಶಾಸಕರ ಬಳಿ ಕೋರಿಕೆ ಸಲ್ಲಿಸಿದರು.
ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲ ಎಂ.ತಮ್ಲೀಕ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.