ಪ್ರಕಟಣೆ

ನಾಗಮಂಗಲದಲ್ಲಿ ನಡೆದ ಘಟನೆ ಸೌಹಾರ್ದತೆ ಬಯಸುವ ಎಲ್ಲರೂ ತಲೆತಗ್ಗಿಸುವ ವಿಚಾರ: ಅಬ್ದುಲ್ ರಜಾಕ್

ಕುಶಾಲನಗರ, ಸೆ 14:ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ಮೂರ್ತಿಯ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟ ಮತ್ತು ಅಂಗಡಿ ಮಳಿಗೆ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ರವರು ತೀವ್ರವಾಗಿ ಖಂಡಿಸಿದ್ದಾರೆ

ನಾಡಿನಾದ್ಯಂತ ಗಣೇಶ ಮೂರ್ತಿಯ ಮೆರವಣಿಗೆ ವೇಳೆ ಸೌಹಾರ್ತೆಯ ಸಂಕೇತವಾಗಿ ಪರಸ್ಪರ ಸಿಹಿ ವಿತರಣೆ ಮಾಡಿ ಸಂಭ್ರಮಿಸುತ್ತಿದ್ದ ಉಭಯಕೋಮಿನವರು, ನಾಗಮಂಗಲದಲ್ಲಿ ನಡೆದ ಘಟನೆ ಸೌಹಾರ್ದತೆ ಬಯಸುವ ಎಲ್ಲರೂ ತಲೆತಗ್ಗಿಸುವಂತೆ ಮಾಡಿದೆ
ನಾಗಮಂಗಲದ ಮಸೀದಿಯ ಮುಂದೆ ಮೆರವಣಿಗೆ ತೆರಳುತ್ತಿದ್ದಾಗ ಕೆಲವು ಕಿಡಿಗೇಡಿಗಳು ಸುಮಾರು ಸಮಯ ಅಲ್ಲೇ ನಿಂತು ಉದ್ರೇಕಕಾರಿ ಘೋಷಣೆ ಕೂಗಿದ್ದೆ ಗಲಭೆಗೆ ಕಾರಣವಾಗಿದ್ದು ಮೆರವಣಿಗೆಯಲ್ಲಿ ತೆರಳುತ್ತಿದ್ದ ಕೆಲವು ಕಿಡಿಗೇಡಿಗಳನ್ನು ಅಲ್ಲೇ ನಿಂತು ಘೋಷಣೆ ಕೂಗಲು ಬಿಟ್ಟ ಪೊಲೀಸರ ಕ್ರಮ ಖಂಡನೀಯ ಇಲ್ಲಿ ಪೊಲೀಸ್ ವೈಫಲ್ಯತೆ ಎದ್ದು ಕಾಣುತ್ತಿದ್ದು ತಪ್ಪಿತಸ್ಥ ಪೊಲೀಸ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿರುವ ಇವರು ಕೃತ್ಯಕ್ಕೆ ಕಾರಣರಾಗಿರುವ ಉದಯಕೋಮಿನ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಆಗ್ರಹಿಸಿದ್ದಾರೆ ಬೂದಿ ಮುಚ್ಚಿದ ಕೆಂಡದಂತಿರುವ ನಾಗಮಂಗಲದಲ್ಲಿ ಬಿಜೆಪಿಯ ನಾಯಕರು ಬೆಂಕಿಗೆ ತುಪ್ಪ ಸುರಿಯುವ ಕೆಲಸದಲ್ಲಿ ನಿರತ ರಾಗದೆ ಶಾಂತಿ ಸೌಹಾರ್ದತೆಯನ್ನು ಸ್ಥಾಪಿಸುವಲ್ಲಿ ನಿರತರಾಗಲಿ ಎಂದಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!