ಕುಶಾಲನಗರ, ಡಿ 15:ಕುಶಾಲನಗರ ಕಾಂಗ್ರೆಸ್ ವತಿಯಿಂದ ಪಕ್ಷದ ಹಿರಿಯ ಮುತ್ಸದ್ದಿ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಅವರು ಮಾತನಾಡಿ, ಶಾಮನೂರರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟ. ಇವರ ಜೀವಿತಾವಧಿಯಲ್ಲಿ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ನಡೆಸುತ್ತಾ ಬಂದಿದ್ದರು ಎಂದರು.
ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿ, ಶಾಮನೂರರ ಶೈಕ್ಷಣಿಕ ಕ್ರಾಂತಿಯಿಂದ ಅದೆಷ್ಟೋ ವಿದ್ಯಾರ್ಥಿಗಳ ಜೀವನ ಹಸನಾಗಿದೆ ಎಂದರು.
ಕೆ.ಪಿ.ಸಿ.ಸಿ ಸದಸ್ಯ ಮಂಜುನಾಥ್ ಗುಂಡೂರಾವ್ ಮಾತನಾಡಿ, ನಾಡು ಕಂಡ ಅಪರೂಪದ ರಾಜಕಾರಣಿ ಶಾಮನೂರು ಶಿವಶಂಕರಪ್ಪರವರ ಅಗಲಿಕೆ ಇಡೀ ನಾಡಿಗೆ ತುಂಬಲಾಗದ ನಷ್ಟ ಎಂದರು.
ನಂತರ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭ ಪ್ರಮುಖರಾದ ಶಿವಶಂಕರ್, ನವೀನ್, ಪ್ರಕಾಶ್, ಚಿರಂಜೀವಿ, ವಿ.ಎಸ್.ಆನಂದ್ ಕುಮಾರ್, ನಂಜುಂಡಸ್ವಾಮಿ, ನಯಾಜ್, ಅಜೀಜ್, ಮಹದೇವ್, ಆದಂ ಹಾಗೂ ಇನ್ನಿತರರು ಇದ್ದರು.
Back to top button
error: Content is protected !!