ಕುಶಾಲನಗರ, ಸೆ 14: ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಯಾಗಿರುವ ಭಾರತ ದೇಶ ವಿವಿಧತೆಯಿಂದ ಕೂಡಿದ್ದು ಹಲವಾರು ಭಾಷೆಗಳು ಮತ್ತು ವಿವಿಧ ಸಂಸ್ಕೃತಿಗಳ ಬುನಾದಿಯ ಮೇಲೆ ದೇಶ ನಡೆಯುತ್ತಿದೆ. ಆದರೆ ಹಲವಾರು ದಶಕಗಳಿಂದ ಭಾರತ ಸರ್ಕಾರ ಪ್ರತಿ ವರ್ಷ ಸೆಪ್ಟೆಂಬರ್ 14 ರಂದು “ಹಿಂದಿ ದಿವಸ್” ಹೆಸರಿನಲ್ಲಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಹಿಂದಿ ಶ್ರೇಷ್ಠ ಭಾಷೆ ಎಂದು ಹೇಳುವ ಮೂಲಕ ಹಿಂದಿಯೇತರ ರಾಜ್ಯಗಳ ಜನರ ಭಾವನೆಗಳಿಗೆ ದಕ್ಕೆಯಾಗುವಂತೆ ನಡೆದುಕೊಳ್ಳುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಳೆದ 25 ವರ್ಷಗಳಿಂದ ಹಿಂದಿ ವಿವಸ್ ಆಚರಣೆಯನ್ನು ವಿರೋಧಿಸಿ ಹೋರಾಟವನ್ನು ನಡೆಸಿಕೊಂಡು ಬಂದಿದೆ.
ಅದರಂತೆ ಕುಶಾಲನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಸರ್ಕಾರದ ಒತ್ತಾಯ ಪೂರ್ವಕ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.
ನಮ್ಮ ತೆರಿಗೆ ಹಣದಿಂದ ಹಿಂದಿ ಭಾಷೆಯನ್ನು ಮೆರೆಸುವುದು ಸ್ಥಳೀಯ ಆಡಳಿ ಭಾಷೆಯನ್ನು ತುಳಿಯುವುದನ್ನು ಹಾಗೂ ಇಂತಹ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಕಿತ್ತೊಗೆಯಬೇಕೆಂದು. ಕೇಂದ್ರದ ಈ ರೀತಿಯ ಒತ್ತಡಕ್ಕೆ ಕನ್ನಡಿಗರು ಮಣಿಯುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ್, ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಎಚ್ಚರಿಸಿದ್ದಾರೆ.
Back to top button
error: Content is protected !!