ಕುಶಾಲನಗರ, ಸೆ 02: ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಸೋಮವಾರಪೇಟೆ ಹಾಗೂ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ನೇರುಗಳಲೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾವಳಿಯು ಕುಶಾಲನಗರದ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜರುಗಿತು. ಪಂದ್ಯ ಕೂಟದಲ್ಲಿ ಸರ್ಕಾರಿ ಪ್ರೌಢಶಾಲೆ ಗೌಡಳ್ಳಿ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು. ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಬಡ್ಡಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಹಾಗೂ ಪ್ರಸ್ತುತ ಬಡ ವಿದ್ಯಾರ್ಥಿಗಳಿಗೆ ಉಚಿತ ಕಬಡ್ಡಿ ತರಬೇತಿಯನ್ನು ನೀಡುತ್ತಿರುವ ಶಾರುಖ್ B.K ಹಾಗೂ ರಾಜ್ಯ ಮಟ್ಟ ಹಾಗೂ ವಿಶ್ವವಿಧ್ಯಾನಿಲಯದ ವಾಲಿಬಾಲ್ ಕ್ರೀಡಾಕೂಟದಲ್ಲಿ ಹೊಸ ಛಾಪನ್ನು ಮೂಡಿಸಿದ ಕೊಡಗಿನ ವಾಲಿಬಾಲ್ ಪ್ರತಿಬೆ ಹಾಗೂ ಬಹಳಷ್ಟು ಬೆಳೆಯುವ ಮಕ್ಕಳಿಗೆ ವಾಲಿಬಾಲ್ ತರಬೇತಿಯನ್ನು ದಾರೆ ಎರೆಯುತ್ತಿರುವ ಸುಭಾಶ್ ಕೂಡಿಗೆ ಮತ್ತು ರಾಷ್ಟ್ರ ಮಟ್ಟದ ಫುಟ್ಬಾಲ್ ಕ್ರೀಡಾಪಟು ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಸೂಪರ್ ಡಿವಿಶನ್ ನಲ್ಲಿ ಬೆಂಗಳೂರಿನ ಹೆಸರಾಂತ ತಂಡಗಳಲ್ಲಿ ಆಡುತ್ತಿರುವ ಕುಶಾಲನಗರದ ಮಹಮ್ಮದ್ ಇರ್ಶಾದ್ ಅವರನ್ನು ಎಲ್ಲರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂಧರ್ಭ ತಾಲೂಕು ಧೈಹಿಕ ಶಿಕ್ಷಣ ಪರಿ ವೀಕ್ಷಕರಾದ ಸುಕುಮಾರಿ, ತಾಲೂಕು ಧೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಲಕ್ಷ್ಮಣ್, ಧೈಹಿಕ ಶಿಕ್ಷಣ ಶಿಕ್ಷಕರಾದ ಪ್ರತಾಪ್ ಟಿ.ಎನ್, ದೇವಾನಂಧ, ಸುರೇಶ, ಪ್ರಸಾದ್, ಮಹೇಂದ್ರ, ಪ್ರವೀಣ್, ನಂದಕುಮಾರ್ ಹಾಗೂ ಕ್ರೀಡಾಕೂಟದ ಪ್ರಮುಖ ದಾನಿಗಳು ಕುಶಾಲನಗರ ಬ್ಲಾಕ್ ಯುವ ಕಾಂಗ್ರೇಸಿನ ಪ್ರಧಾನ ಕಾರ್ಯದರ್ಶಿ ಆದಂ. ಎಸ್ ಹಾಗೂ ಅಂತರ್ ಜಿಲ್ಲಾ ವೀಕ್ಷಕ ವಿವರಣೆಗಾರರಾದ ಇಕ್ಬಾಲ್ ನಂಜರಾಯಪಟ್ಟಣ ರವರು ಉಪಸ್ಥಿತರಿದ್ದರು.
Back to top button
error: Content is protected !!