ಪ್ರತಿಭೆ

ರಾಜ್ಯಮಟ್ಟದ ಡ್ಯಾನ್ಸ್ ಫೆಸ್ಟಿವಲ್: ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಸಾಧನೆ

ಕುಶಾಲನಗರ ಸೆ 01: ಭಾನುವಾರ ಚಾಮರಾಜನಗರದಲ್ಲಿ ಅವತಾರ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಇವರ ವತಿಯಿಂದ 11 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ “ಡ್ಯಾನ್ಸ್ ಫೆಸ್ಟಿವಲ್” ನಲ್ಲಿ ಕೂಡಿಗೆಯ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ನೃತ್ಯ ಶಾಲೆಯ ಮಕ್ಕಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಓವರಲ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿ ಕೊಂಡಿರುತ್ತಾರೆ. ಈ ನೃತ್ಯ ಸ್ಪರ್ಧೆಯಲ್ಲಿ ಒಟ್ಟು 50 ಕ್ಕೂ ಅಧಿಕ ತಂಡಗಳು ನಾನಾ ಜಿಲ್ಲೆಗಳಿಂದ ಭಾಗವಹಿಸಿದ್ದರು. ಅದರಲ್ಲಿ ಕೊಡಗಿನಿಂದ ಭಾಗವಹಿಸಿದ್ದ ಎ ಕ್ರಿಯೇಟಿವ್ ನೃತ್ಯ ಶಾಲೆಯ ಮಕ್ಕಳು ಸೋಲೋ ವಿಭಾಗ, ಕಪಲ್ ವಿಭಾಗ ಹಾಗೂ ಗುಂಪು ವಿಭಾಗದ ನೃತ್ಯ ಸ್ಪರ್ಧೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ “ಜಾನಪದ ಕಲೆಯ ತವರೂರು” ಎಂದೇ ಹೆಸರುವಾಸಿಯಾಗಿರುವ ಚಾಮರಾಜನಗರದಲ್ಲಿ ಚಾಂಪಿಯನ್ ಟೈಟಲ್ ವಿಜೇತರಾಗಿರುತ್ತಾರೆ ಹಾಗೆಯೇ ತೀರ್ಪುಗಾರರ ಮನಗೆದ್ದು ಮೈ ನಡುಗಿಸುವ ನೃತ್ಯ ಪ್ರದರ್ಶನ ನೀಡಿ ನೆರೆದಿದ್ದ ಜನರ ಮತ್ತು ಇತ್ಯಾದಿ ತಂಡಗಳ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
ಈ ನೃತ್ಯ ಸ್ಪರ್ಧೆಗೆ ಕರ್ನಾಟಕದ ನೃತ್ಯ ಇತಿಹಾಸದಲ್ಲಿ ಟಿ.ವಿ ರಿಯಾಲಿಟಿ ಶೋಗಳಲ್ಲಿ ವಿಜೇತರಾದ ಹಾಗೂ ಕರ್ನಾಟಕದ ಹೆಮ್ಮೆಯ ನೃತ್ಯ ಪಟುಆಗಿರುವ ಬೆಂಗಳೂರಿನ “ಸದ್ವಿನ್ ಶೆಟ್ಟಿ” ಹಾಗೆಯೇ ಝೀ ಕನ್ನಡ ವಾಹಿನಿಯ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ” ವಿಜೇತ ನೃತ್ಯ ಪಟು ಬೆಂಗಳೂರಿನ ” ಬೃಂದಾ ಪ್ರಭಾಕರ್” ರವರು ತೀರ್ಪುಗಾರರಾಗಿದ್ದರು.
ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದಲ್ಲಿ ವಿಜೇತರಾದ ತಂಡಕ್ಕೆ
ಕಾರ್ಯಕ್ರಮದ ಆಜೋಜಕಾರದ ಅವತಾರ್ ಪ್ರವೀಣ್ ಮತ್ತು ಊರಿನ ಗುರುಹಿರಿಯರು ಹಾಗೂ ನೃತ್ಯ ಶಾಲೆಯ ಪೋಷಕರು ವಿಜೇತ ನೃತ್ಯ ಶಾಲೆಗೆ ಶುಭ ಹಾರೈಸಿ ಪ್ರೋತ್ಸಾಹಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!