ಕುಶಾಲನಗರ, ಆ. 31: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡುಮಂಗಳೂರು, ಬಸವತ್ತೂರು ಸರಹದ್ದಿನ ವ್ಯಾಪ್ತಿಯ ರಾಜ ಕಾಲುವೆಯಿದ್ದು, ಕಳೆದ 10 ವರ್ಷಗಳಿಂದ ಈ ಕಾಲುವೆಯನ್ನು ಮುಚ್ಚಲಾಗಿ ಬೆಟ್ಟದ ಕಡೆಯಿಂದ ಮತ್ತು ಗ್ರಾಮದ ಮೇಲ್ಬಾಗದ ಕಡೆಯಿಂದ ಬರುವ ಮಳೆಯ ನೀರು ಸೇರಿದಂತೆ ಗ್ರಾಮ ವ್ಯಾಪ್ತಿಯ ಬೀದಿ ನೀರು ಹರಿಯುವಿಕೆಗೆ ಬಾರಿ ತೊಂದರೆಗಳು ಅಗುತ್ತಿವೆ. ಇದರಿಂದಾಗಿ ಕಾಲುವೆ ತೆರವುಗೊಳಿಸುವಂತೆ ಈ ವ್ಯಾಪ್ತಿಯ ಗ್ರಾಮಸ್ಥರ ಪ್ರಮುಖ ಅಗ್ರಹವಾಗಿದೆ.
ಇದಕ್ಕೆ ಸಂಬಂಧಿಸಿದಂತೆ 25 ಕ್ಕೂ ಹೆಚ್ಚು ಕುಟುಂಬದವರು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ನವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿಯನ್ನು ಸಲ್ಲಿಸಲಾಗಿತು.
ಅದರ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಬಂಧಿಸಿದ ಕಂದಾಯ ಇಲಾಖೆಯ ಮುಖೇನ ದಾಖಲೆಗಳ ಪರಿಶೀಲನೆ ನಡೆಸಿ, ಜಿಲ್ಲಾಧಿಕಾರಿ ನವರಿಗೆ ವರದಿಯನ್ನು ನೀಡಲಾಗಿದೆ ಅದರೆ ಅದನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರೂ ಸಹ ಗ್ರಾಮ ಪಂಚಾಯತಿ, ಸೇರಿದಂತೆ ಸಂಬಂಧಿಸಿದ ಇಲಾಖೆಯವರು ಮುಂದಾಗುತ್ತಿಲ್ಲಾಎಂದು ಗ್ರಾಮಸ್ಥರಾದ ಲೋಕೇಶ್, ಗಫಾರ್ ಸೇರಿದಂತೆ ಅನೇಕ ಗ್ರಾಮಸ್ಥರ ತಿಳಿಸಿದ್ದಾರೆ.
Back to top button
error: Content is protected !!