ಸೋಮವಾರಪೇಟೆ, ಆ 28: ಸಮಾಜದಲ್ಲಿ ಸಂಘಟನೆಯೊಂದಿಗೆ ಸಾಮರಸ್ಯವು ಮುಖ್ಯವೆಂದು ಇಲ್ಲಿನ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ಏರ್ಪಡಿಸಲಾಗಿದ್ದ ಸೋಮವಾರಪೇಟೆ ವೀರಶೈವ ಲಿಂಗಾಯತ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ,ಆಚಾರವಿಚಾರಗಳಿವೆ ಅವುಗಳನ್ನು ಉಳಿಸಿ ಬೆಳೆಸುವುದರೊಂದಿಗೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯಾವಾಗಬೇಕಿದೆ ಎಂದರು.
ಸಮಾಜ ಸಂಘಟಿವಾದರೆ ಬಲಿಷ್ಟವಾಗುತ್ತದೆ ಅದರಂತೆ ಸಾಮರಸ್ಯವಿದ್ದರೆ ಸೌಹಾರ್ಧತೆ ನೆಲೆಸುತ್ತದೆ,ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಆಸ್ತಿಪಾಸ್ತಿ ರಕ್ಷಣೆ, ಬಸವೇಶ್ವರ ಕಲ್ಯಾಣ ಮಂಟಪ ಹಾಗೂ ವಿರಕ್ತ ಮಠದ ಬಗ್ಗೆ ಮಹಾಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಸಮಾಜದ ಯಜಮಾನ ಶಿವಕುಮಾರ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.ಶೆಟ್ರು ಮೃತ್ಯುಂಜಯ,ಕಾರ್ಯದರ್ಶಿ ನಾಗರಾಜ್ ಹಾಗು ಸಮಿತಿಯ ನಿರ್ದೇಶಕರುಗಳು ವೇದಿಕೆಯಲ್ಲಿ ಉಪಸ್ಥಿತಿತರಿದ್ದರು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ 80ಕಿಂತ ಹೆಚ್ಚಿನ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
Back to top button
error: Content is protected !!