ಕುಶಾಲನಗರ, ಆ 28: ಕೂಡಿಗೆಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ವಿವಿದ್ದೋದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘವು 2023- 24 ನೇ ಸಾಲಿನಲ್ಲಿ ರೈತರಿಗೆ ಕೃಷಿ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ವ್ಯವಹಾರ ನಡೆಸಿ ಈ ಸಾಲಿನಲ್ಲಿ 75.60 ಲಕ್ಷ ಲಾಭಾಂಶವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಸಂಘದ ವ್ಯಾಪ್ತಿಯಲ್ಲಿ 18 ಗ್ರಾಮಗಳಿದ್ದು, ಅದರಲ್ಲಿ ಎಲ್ಲಾ ಗ್ರಾಮಗಳು ಒಳಗೊಂಡಂತೆ 2023-24ನೇ ಸಾಲಿನಲ್ಲಿ 4228 ಮಂದಿ ಸದಸ್ಯತ್ವವನ್ನು ಹೊಂದಿರುತ್ತಾರೆ.
ಸಂಘವು ಸದಸ್ಯರ ಪಾಲು ಬಂಡವಾಳವಾಗಿ 36.08 ಕೋಟಿ ಹಣವನ್ನು ಹೊಂದಿರುತ್ತದೆ.
ಇದರಲ್ಲಿ 22.57 ಕೋಟಿ ಠೇವಣಿ ಸಂಗ್ರಹವಾಗಿರುತ್ತದೆ. ಸಂಘದಲ್ಲಿ ದುಡಿಯುವ ಬಂಡವಾಳವು 42.84 ಕೋಟಿಯಿದ್ದು ಕೃಷಿ ಮತ್ತು ಕೃಷಿಯೇತರ ಮತ್ತು ಇತರೆ ವ್ಯಾಪಾರ ವಹಿವಾಟುಗಳಿಂದ ಒಟ್ಟಾಗಿ ಸಂಘವು ಈ ಸಾಲಿನಲ್ಲಿ 75.60 ಲಕ್ಷ ಲಾಭಾಂಶ ಗಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ಸಂಘವು ಮುಂದಿನ ದಿನಗಳಲ್ಲಿ ರೈತರ ಅಭಿವೃದ್ಧಿಗೆ ಪೂರಕವಾದ ಹೊಸ ಯೋಜನೆಗಳನ್ನು ಹಮ್ಮಿಕೊಂಡು ರೈತರ ದಾಖಲೆಯ ಅನುಗುಣವಾಗಿ ಅಭಿವೃದ್ಧಿಗೆ ಹೊಸ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ ಕುಮಾರ್ ತಿಳಿಸಿದ್ದಾರೆ.
ಸಂಘವು ಕಳೆದ ಸಾಲಿನಂತೆಯೇ ಈ ಸಾಲಿನಲ್ಲಿಯು ಆಡಿಟ್ ಗ್ರೇಡ್ ನಲ್ಲಿ ” ಎ” ತರಗತಿಯನ್ನು ಹೊಂದಿದೆ. ಎಂದು ಸಂಘದ ಕಾರ್ಯನಿರ್ವಾಣಧಿಕಾರಿ ಎಂ.ಪಿ. ಮೀನಾ ಮಾಹಿತಿ ನೀಡಿರುತ್ತಾರೆ.
Back to top button
error: Content is protected !!