ಕುಶಾಲನಗರ, ಮಾ 14: ಕುಶಾಲನಗರ ತಾಲೂಕಿನಾದ್ಯಂತ ಸರಿಸುಮಾರು 1900 ರಷ್ಟು ಬಿಪಿಎಲ್ ಪಡಿತರ ಚೀಟಿ ಎಪಿಎಲ್ ಗೆ ಪರಿವರ್ತನೆಯಾಗಿದ್ದು ಈ ಸಂಬಂಧ ತಿದ್ದುಪಡಿಗೆ ಅವಕಾಶವಿದ್ದು ಫಲಾನುಭವಿಗಳು ಕೂಡಲೆ ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಲು ಶಾಸಕ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳ ಬಿಪಿಎಲ್ ರದ್ದಾಗದ ರೀತಿ ಕ್ರಮವಹಿಸಲು ಸೂಚಿಸಲಾಗಿದೆ. ಈ ಸಂಬಂಧ ತಹಸೀಲ್ದಾರ್ ಕಛೇರಿ ಅಥವಾ ಶಾಸಕರ ಕಛೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವೈದ್ಯಕೀಯ ತುರ್ತು ಸಂದರ್ಭಕ್ಕೆ ಕೂಡಲೆ ಬಿಪಿಎಲ್ ಪಡಿತರ ಚೀಟಿ ವಿತರಣೆ ವ್ಯವಸ್ಥೆಯಿದೆ. ಆದಾಯ ಮಿತಿ ಪರಿಷ್ಕರಣೆ ಬಗ್ಗೆ ಕೂಡ ಚರ್ಚೆ ನಡೆದಿದ್ದು ಇದು ಜಾರಿಯಾದಲ್ಲಿ ಹೆಚ್ಚಿನ ಅನುಕೂಲ ಲಭಿಸಲಿದೆ ಎಂದು ಅವರು ತಿಳಿಸಿದರು.
Back to top button
error: Content is protected !!