ಕುಶಾಲನಗರ, ಆ 02: ಪಿರಿಯಾಪಟ್ಟಣ ತಾಲ್ಲೂಕು ಬೈಲಕುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಆವರ್ತಿ ಗ್ರಾಮದ ವಾಸಿಯಾದ ಆರೋಪಿ ಕುಮಾರ @ ಕುಮಟ ಬಿನ್ ಲೇಟ್ ಸಣ್ಣಶೆಟ್ಟಿ, 47 ವರ್ಷ, ಈತನು ದಿ:27-04- 2022 ರಂದು ಪ್ರಕರಣದ 19 ವರ್ಷದ ಸಂತ್ರಸ್ತ ಬುದ್ಧಿಮಾಂಧ್ಯ ಮಹಿಳೆಯು ತನ್ನ ತಾಯಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಒಬ್ಬಳೇ ವಾಸವಿದ್ದಾಗ ಮಧ್ಯಾಹ್ನ 1-00 ರಿಂದ 2-00 ಗಂಟೆ ಸಮಯದಲ್ಲಿ ಸಂತ್ರಸ್ತೆ ಇದ್ದ ಮನೆಗೆ ಆರೋಪಿಯು ಅತ್ಯಾಚಾರ ಮಾಡುವ ಉದ್ದೇಶದಿಂದ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲು ಹಾಕಿಕೊಂಡು ಸಂತ್ರಸ್ತೆ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದು, ಈ ಬಗ್ಗೆ ಆತನ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಹಿಂದಿನ ತನಿಖಾಧಿಕಾರಿಯಾಗಿದ್ದ ಪ್ರಕಾಶ್.ಬಿ.ಜಿ, ಸಿ.ಪಿ.ಐ ಬೈಲಕುಪ್ಪೆ ವೃತ್ತ ಅವರು ಆರೋಪಿ ವಿರುದ್ಧ ತನಿಖೆ ಕೈಗೊಂಡು ‘ ದೋಷಾರೋಪಣಾ ಪತ್ರವನ್ನು ಸಲ್ಲಿಸಿಕೊಂಡಿದ್ದರು.
ಈ ಪ್ರಕರಣವು ಮಾನ್ಯ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರಿನಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಎಂ.ರಮೇಶ ರವರು ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಿಗಳನ್ನು ಪರಿಗಣಿಸಿ ಮತ್ತು ಸಂತ್ರಸ್ತ ಮಹಿಳೆಯ ಸಾಕ್ಷಿಯನ್ನು ಪರಿಗಣಿಸಿ ಆರೋಪಿತನ ಮೇಲಿನ ಆರೋಪ ದೃಢಪಟ್ಟ ಮೇರೆಗೆ ಆರೋಪಿತನಿಗೆ ಕಲಂ 376(2)(ಎಲ್) ಐಪಿಸಿ ಅಡಿಯ ಅಪರಾಧಕ್ಕೆ 10 ವರ್ಷಗಳ ಕಠಿಣ ಸಜೆ ಮತ್ತು ರೂ.50,000/- ದಂಡ ವಿಧಿಸಿದ್ದು ಮತ್ತು ಕಲಂ 450 ಐಪಿಸಿ ಅಡಿಯಲ್ಲಿನ ಅಪರಾಧಕ್ಕೆ 6 ತಿಂಗಳ ಕಠಿಣ ಸೆರೆಮನೆವಾಸ ವಿಧಿಸಿ ತೀರ್ಪು ನೀಡಿರುತ್ತದೆ. ಸಂತ್ರಸ್ತ ಮಹಿಳೆಗೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಕ್ತ ಪರಿಹಾರ ನೀಡಲು ನಿರ್ದೇಶಿಸಿರುತ್ತದೆ.
ಸದರಿ ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ.ನಾಗರಾಜ ಸರ್ಕಾರದ ಪರ ವಾದ ಮಂಡಿಸಿರುತ್ತಾರೆ.
Back to top button
error: Content is protected !!