ಪ್ರಕಟಣೆ

ಕಾವೇರಿ ತುಲಾ ಸಂಕ್ರಮಣ: ಅನಗತ್ಯ ಆಚರಣೆ ಇಲ್ಲದ ಪದ್ದತಿ ಆಳವಡಿಕೆ ಬೇಡಿಕೆಗೆ ವಿರೋಧ

ಕುಶಾಲನಗರ, ಅ 15: ಪ್ರತಿ‌ ವರ್ಷದಂತೆ ಅಕ್ಟೋಬರ್ ತಿಂಗಳಲ್ಲಿ ದಿನಗಳಲ್ಲಿ ಕಾವೇರಿ ತುಲಾ ಸಂಕ್ರಮಣದಂದು ಕಾವೇರಿ ಮಾತೆಯ ತೀರ್ಥೋದ್ಬವ ಜಾತ್ರಾ ಕಾರ್ಯಕ್ರಮಗಳು ದೇವತಾ ಕಾರ್ಯರೂಪದಲ್ಲಿ ನಡೆದು ಬರುತ್ತಿರುವ ಕ್ರಮ ಕೊಡಗಿನ ಹಾಗೂ ದೇಶದ ಕಾವೇರಿ ಭಕ್ತರಿಗೆ ಒಂದು ಸಂಭ್ರಮ ಪುರಾಣ ಪ್ರಸಿದ್ದಿಯಾದ ಈ ಕಾರ್ಯ ಭಕ್ತಿ ಪೂರ್ವಕವಾಗಿ ಶತಮಾನಗಳಿಂದ ಕೈಗೊಳ್ಳುತ್ತಿರುವಂತೆ ಪದ್ದತಿಗಳು, ಸಾಂಪ್ರದಾಯಿಕ ಕಾರ್ಯಕ್ರಮಗಳು ಹಾಗೆಯೇ ಅನುಸರಿಸಲಾಗುತ್ತಿರುವ ಪರಂಪರಾಗತ ಆಚಾರಣಾ ಕಾರ್ಯಕ್ರಮಗಳು ಹಿಂದಿನಂತೆಯೇ ಮುಂದುವರಿಯಬೇಕು. ಹಾಗೆಯೇ ಈ ವಿಷಯದಲ್ಲಿ ಅನಗತ್ಯ ವಿಷಯಗಳನ್ನು ಆಚರಣಾ ಕ್ರಮದ ಮಧ್ಯದಲ್ಲಿ ತೂರಿ ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ಹುನ್ನಾರಗಳು ತೂರಿ ಬರುವುದಕ್ಕೆ ಅವಕಾಶವಾಗಬಾರದು.
ತೀರ್ಥರೂಪಿಣಿಯಾದ ಕಾವೇರಿ ತಾಯಿ ಈ ನಾಡಿನ ತಾಯಿ, ದೇಶದ ಕಾವೇರಿ ಭಕ್ತ ಗಣದ ದೈವಸ್ವರೂಪಿಣಿ. ಆದರೆ ಕಳೆದ ೨ ದಿವಸಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಒಂದೆರಡು ಸಮಾಜ ಹಾಗೂ ಸಂಘಟನೆಗಳು ಕಾವೇರಿ ಮಾತೆಯ ಹೆಸರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲಾಗುತ್ತಿರುವ ಹಾಗೂ ಕಾವೇರಿ ತುಲಾ ಸಂಕ್ರಮಣದಂದು ಅನಗತ್ಯವಾಗಿ ಆಚರಣೆಯಲ್ಲಿ ಇಲ್ಲದ ಪದ್ದತಿಗಳನ್ನು ಆಳವಡಿಸುವಂತೆ ಶಾಸಕರನ್ನು ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿರುವ ಹಾಗೂ ಬೆದರಿಕೆ ಒಡ್ಡುತ್ತಿರುವ ಹೇಳಿಕೆಗಳನ್ನು ಹರಿಬಿಟ್ಟಿರುವುದನ್ನು ಗಮನಿಸಲಾಗಿದೆ. ಈ ಕುಕೃತ್ಯವನ್ನು ನಾವುಗಳು ಖಂಡಿಸುತ್ತೇವೆ.
ಶತಮಾನಗಳಿಂದ ತುಲಾ ಸಂಕ್ರಮಣದಂದು ತೀರ್ಥೋದ್ಬವ ಸಂದರ್ಭ ಕಾವೇರಿ ಪೂಜಾ ಕುಂಡಿಕೆಯ ಸುತ್ತಮುತ್ತ ಜನಜಂಗುಳಿ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಪೋಲೀಸ್ ಸಹಕಾರದೊಂದಿಗೆ ಕೆಲವೊಂದು ನಿಯಂತ್ರಣ ಕ್ರಮ ಕೈಗೊಳ್ಳುತ್ತಿದ್ದು ಅದು ಪದ್ದತಿಯೊಂದಿಗೆ ಬೆರೆತು ತೀರ್ಥೋದ್ಬವ ಶಾಂತ ರೀತಿಯಲ್ಲಿ ನಡೆಯುತ್ತಿದ್ದು ಇದರಿಂದಾಗಿ ಜಿಲ್ಲೆ ಶಾಂತಿಯಿಂದ ಸಾಗುತಿತ್ತು. ಆದರೆ ಕೆಲವು ಸಂಘಟನೆ ಹಾಗೂ ಸಮಾಜಗಳು ಒಂದೆರಡು ದಿವಸಗಳ ಹಿಂದೆ ನೀಡುತ್ತಿರುವ ಹೇಳಿಕೆಗಳು ಹಾಗೂ ಒತ್ತಡಗಳು ಕಾವೇರಿ ತೀರ್ಥೋದ್ಬವ ಸಂದರ್ಭವನ್ನು ಹಾಳುಗೆಡುವ ಪ್ರಯತ್ನ ಎನ್ನಬೇಕಾಗಿದೆ.
ಪ್ರತಿ ವರ್ಷ ತೀರ್ಥೋದ್ಬವ ಸಂದರ್ಭ ಕುಂಡಿಕೆಯ ಸುತ್ತ ಮುತ್ತ ಜಿಲ್ಲಾಡಳಿತ ಯಾವ ರೀತಿಯಲ್ಲಿ ಜವಬ್ದಾರಿ ನಿರ್ವಹಿಸುವ ಕುಟುಂಬಗಳು ಹಾಗೂ ತಕ್ಕ ಮುಖ್ಯಸ್ಥರಿಗೆ ಮಾತ್ರ ಹಾಜರಿರಲು ಅವಕಾಶ ಕಲ್ಪಿಸಲಾಗಿತ್ತೋ ಆ ಪದ್ದತಿ ಮಾತ್ರ ಮುಂದುವರಿಯುವಂತೆ ಜಿಲ್ಲಾಡಳಿತ ಹಾಗೂ ಶಾಸಕರನ್ನು ಒತ್ತಾಯಿಸುತ್ತೇನೆ. ಅದನ್ನು ಮೀರಿ ಜಿಲ್ಲಾಡಳಿತ ಅನಗತ್ಯವಾದ ವ್ಯಕ್ತಿಗಳನ್ನು ಕೊಳದ ಪಕ್ಕದಲ್ಲಿ ನಿಲ್ಲಿಸುವ ಬೆದರಿಕೆ ಹಾಗೂ ಒತ್ತಾಯಕ್ಕೆ ಮಣಿದಲ್ಲಿ ನಾವುಗಳು ಭಾಗಮಂಡಲ ಸುತ್ತಮುತ್ತಲಿನ ಹಬ್ಬದ ಕಟ್ಟು ಪಾಡುಗಳನ್ನು ದೇವತಾ ನಿಯಮದಂತೆ ಪಾಲಿಸುತ್ತಿರುವ ಸುಮಾರು ೨೫ ಕುಟುಂಬಗಳ ಪಟ್ಟೆದಾರರಿಗೆ ಕುಂಡಿಕೆಯ ಸುತ್ತಮುತ್ತ ಸಾಂಪ್ರದಾಯಿಕ ಧಿರಿಸಿನಲ್ಲಿ ನಿಂತು ಕಾವೇರಿಯನ್ನು ಪ್ರಾರ್ಥಿಸಲು ಸಿದ್ದತೆ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆದುದರಿಂದ ಯಾವುದೇ ಬೆದರಿಕೆಗಳಿಗೆ ಮಣಿಯದೆ ಜಿಲ್ಲಾಡಳಿತ ಕಾವೇರಿ ತೀರ್ಥೋದ್ಬವವನ್ನು ಯಥಾಸ್ಥಿತಿಯಲ್ಲಿ ಶಾಂತ ರೀತಿಯಲ್ಲಿ ಜರಗುವಂತೆ ಅನುವು ಮಾಡಿಕೊಡುವಂತೆ ಕೊಡಗು ಗೌಡ ಸಮಾಜ,(ರಿ) ಮಡಿಕೇರಿ, ಕುಶಾಲನಗರ ಗೌಡ ಸಮಾಜ, (ರಿ),
ಚೇರಂಬಾಣೆ ಗೌಡ ಸಮಾಜ, (ರಿ)
ಭಾಗಮಂಡಲ ಗೌಡ ಸಮಾಜ, (ರಿ), ಕೊಡಗು ಗೌಡ ಯುವ ವೇದಿಕೆ(ರಿ), ಗೌಡ ಯುವಕ ಸಂಘ(ರಿ) ಕುಶಾಲನಗರ ದವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!