ಕಾರ್ಯಕ್ರಮ

ಕನ್ನಡಸಿರಿ ಸ್ನೇಹ ಬಳಗದಿಂದ ಹಾರಂಗಿ‌ ‌ಜಲಾಶಯ ಕುರಿತು ಸಂವಾದ

ಕುಶಾಲನಗರ, ಆ 01: ಕುಶಾಲನಗರದ ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಸರ್ಕಾರಿ ಎಂಜಿನಿಯರ್ ಕಾಲೇಜಿನಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಮತ್ತು ಮಾಜಿ ಮುಖ್ಯಂಮತ್ರಿ ವೀರೇಂದ್ರ ಪಾಟೀಲ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಹಾರಂಗಿ ಜಲಾಶಯದ ಬಗ್ಗೆ ಸಂವಾದ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕಳೆದ ಐದು ದಶಕಗಳ ಹಿಂದೆ ನಿರ್ಮಾಣವಾದ ಹಾರಂಗಿ‌ ಅಣೆಕಟ್ಟೆಯಿಂದ ಐದು ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಿದೆ. ಜಮೀನು ಕಳೆದುಕೊಂಡವರಿಗೆ ಸರ್ಕಾರ ‌ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಿದೆ ಎಂದರು.ಅಣೆಕಟ್ಟುಗಳ ಪ್ರಾಮುಖ್ಯತೆ ತುಂಬಾ ಹೆಚ್ಚಾಗಿದೆ. ಪ್ರವಾಹವನ್ನು ತಡೆಗಟ್ಟಲು, ಜೀವಗಳ ಮತ್ತು ಆಸ್ತಿ ಹಾನಿಗಳಿಗೆ ಕಡಿವಾಣ ಹಾಕಲು ತುಂಬ ಅನುಕೂಲವಾಗಿದೆ ಎಂದರು.
ಎಂಜಿನಿಯರ್ ವಿದ್ಯಾರ್ಥಿಗಳಿಗೆ ಜಲಾಶಯ ವೀಕ್ಷಣೆಗೆ ಅವಕಾಶ‌ ಮಾಡಿಕೊಡಬೇಕು. ಅಣೆಕಟ್ಟೆಯ ಉಪಯೋಗಗಳ ಬಗ್ಗೆ ತಿಳಿಸಿಕೊಡುವ ಕೆಲಸವನ್ನು ನೀರಾವರಿ ಅಧಿಕಾರಿಗಳು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.ಜೊತೆಗೆ ವಿದ್ಯಾರ್ಥಿ ಸ್ವಚ್ಛತೆ ಕಾಪಾಡಬೇಕು.ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು ಎಂದರು.
ಸರ್ಕಾರಿ ಎಂಜಿನಿಯರ್ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ‌ಮಾತನಾಡಿ, ಕಾಲೇಜು ಅಭಿವೃದ್ಧಿಗೆ ಶಾಸಕರ ಸಹಕಾರದಿಂದ ರೂ.2 ಕೋಟಿ ಅನುದಾನ ಮಂಜೂರು ಆಗಿದೆ. ಈ ಅನುದಾನದಲ್ಲಿ ಸಂಸ್ಥೆಯ ಸುತ್ತಲು ಕಾಂಪೌಂಡ್ ಹಾಗೂ ಪ್ರವೇಶ ದ್ವಾರದಲ್ಲಿ ಕಮಾನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಕನ್ನಡಸಿರಿ ಬಳಗದ ಸಂಚಾಲಕ ಲೋಕೇಶ್ ಸಾಗರ ಮಾತನಾಡಿ ಹಾರಂಗಿ ಜಲಾಶಯ ನಿರ್ಮಾಣವಾಗಲು ಕಾರಣ‌ಕರ್ತರಾದ ಮಾಜಿ ಮುಖ್ಯಂಮತ್ರಿ ವೀರೇಂದ್ರ ಪಾಟೀಲ್ ಅವರನ್ನು ಸ್ಮರಿಸಬೇಕಾಗಿದೆ ಎಂದರು.

ಈ ಸಂದರ್ಭ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಸಿದ್ದರಾಜು,ಕಿರಣ್,ಇಡಿಸಿಎಲ್ ವಿದ್ಯುತ್ ಉತ್ಪಾದನಾ ಘಟಕದ ವ್ಯವಸ್ಥಾಪಕ
ಶಿವಸುಬ್ರಮಣ್ಯಂ, ಕೊಡಗು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಹಂಡ್ರಂಗಿ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!