ಕುಶಾಲನಗರ, ನ 21: ದಿನಾಂಕ: 19-11-2025 ರ ಬುಧವಾರ ಕುಶಾಲನಗರ ಶ್ರೀ ಗಣಪತಿ ರಥೋತ್ಸವ ಮತ್ತು ಜಾತ್ರೋತ್ಸವ ಅಂಗವಾಗಿ ಸಾಂಸ್ಕೃತಿಕ ಸಂಭ್ರಮದ ಕಾರ್ಯಕ್ರಮಗಳಲ್ಲಿ ‘ಕುಣಿಯೋಣ ಬಾರಾ’ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಜಿಲ್ಲೆಯ ಹಲವು ಕಡೆಗಳಿಂದ ನೃತ್ಯ ತಂಡಗಳು ಆಗಮಿಸಿದ್ದು ಅದರಲ್ಲಿ ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದ ಕೊಡಗಿನ ಹೆಸರಾಂತ ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ನೃತ್ಯ ಪ್ರಕಾರವನ್ನು ನೀಡಿ ಪ್ರಥಮ ರನ್ನರಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡರು. ಬಹಳ ಜಿದ್ದಾ ಜಿದ್ದಿಯ ನೃತ್ಯ ಸ್ಪರ್ಧೆ ಇದಾಗಿದ್ದು ಇದರಲ್ಲಿ ಎ ಕ್ರಿಯೇಟಿವ್ ವಿದ್ಯಾರ್ಥಿಗಳು ಸತತ ಉತ್ತಮ ಪ್ರಯತ್ನದಿಂದ ಜನರ ಕಣ್ಮನಸೆಳೆದರು. ನೃತ್ಯ ಸ್ಪರ್ಧೆಗೆ ಚಾಮರಾಜನಗರದ ಶ್ರೀ ಅವತಾರ್ ಪ್ರವೀಣ್ ಹಾಗೂ ಶ್ರೀ ಮಿಲನಾ ಭರತ್ ಇಬ್ಬರು ಪ್ರಮುಖ ತೀರ್ಪುಗಾರರಾಗಿ ಆಗಮಿಸಿದ್ದರು. ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದ ತಂಡಕ್ಕೆ ಕುಶಾಲನಗರ ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಶ್ರೀ ವಿ. ಪಿ ಶಶಿಧರ್ ಸದಸ್ಯರಾದ ಶ್ರೀ ವಿ.ಎಸ್ ಆನಂದಕುಮಾರ್ ಮತ್ತು ಶ್ರೀ ಬಿ. ಎಸ್ ಚಂದನ್ ಕುಮಾರ್ ಆಕರ್ಷಕ ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮಕ್ಕೆ ನೃತ್ಯ ಶಾಲೆಯ ಎಲ್ಲಾ ಪೋಷಕರು ಹಾಗೂ ಸಾರ್ವಜನಿಕರು ಸ್ಪರ್ಧಾ ತಂಡಗಳ ನೃತ್ಯವನ್ನು ಕೊನೆಯವರೆಗೂ ವೀಕ್ಷಿಸಿ ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಿ ಕಣ್ತುಂಬಿಕೊಂಡರು.
Back to top button
error: Content is protected !!