ಮಳೆ

ಮನೆ ತಡೆಗೋಡೆ ಕುಸಿತ: ಅಪಾಯದಲ್ಲಿದ್ದ ಕುಟುಂಬಕ್ಕೆ ಅಗತ್ಯ ಸೌಕರ್ಯ ಒದಗಿಸಲು ಶಾಸಕರ ಸೂಚನೆ

ಕುಶಾಲನಗರ, ಜು 31: ಗುಮ್ಮನಕೊಲ್ಲಿ-ಹಾರಂಗಿ ರಸ್ತೆಯಲ್ಲಿ ವಸಂತ ಎಂಬವರ ಮನೆಯ ತಡೆಗೋಡೆ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.

ಅಪಾಯದಂಚಿನಲ್ಲಿದ್ದ ಎರಡು ಮನೆಗಳಲ್ಲಿ ನಿವಾಸಿಗಳು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಬೀಳುವ ಹಂತದಲ್ಲಿದ್ದ ವಿದ್ಯುತ್ ಕಂಬ ಶೀಘ್ರದಲ್ಲೇ ತೆರವುಗೊಳಿಸಲು ಶಾಸಕರು ಸೂಚನೆ ನೀಡಿದರು. ತಡೆಗೋಡೆ ಯನ್ನು ಆದಷ್ಟು ಬೇಗ ಸರಿಪಡಿಸುವಂತೆ ಅವರು ನಿರ್ದೇಶನ ನೀಡಿದರು.

ಈ ಸಂದರ್ಭ ಸ್ಥಳೀಯ ಮುಖಂಡರು ಸ್ಥಳದಲ್ಲಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!