ಪಿರಿಯಾಪಟ್ಟಣ, ಜು 22: ಧಾರಾಕಾರ ಮಳೆ ಸುರಿಯುತ್ತಿದ್ದರೂ ಕೆರೆ ಕೋಡಿ ದುರಸ್ತಿ ಮಾಡದ ಹಿನ್ನಲೆಯಲ್ಲಿ ಹುಲುಸಾಗಿ ಬೆಳೆದಿದ್ದ ತಂಬಾಕು ಹಾಗೂ ಅಡಿಕೆ ಬೆಳೆ ನಾಶವಾಗಿದ್ದು ಇದಕ್ಕೆ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿ ಪರಿಹಾರ ನೀಡುವಂತೆ ಹರಿಲಾಪುರ ಗ್ರಾಮದ ರೈತ ಮಹಿಳೆ ನಾಗಮ್ಮ ಶಂಕರೇಗೌಡ ಆಗ್ರಹಿಸಿದ್ದಾರೆ.
ಕಳೆದ ಹತ್ತು ಹಲವು ದಿನಗಳಿಂದ ತಾಲೂಕಿನಾಧ್ಯಂತ ಸುರಿದ ಬಾರಿ ಮಳೆಗೆ ತಾಲೂಕಿನ ಹರಿಲಾಪುರ ಗ್ರಾಮದ ರೈತ ಮಹಿಳೆ ನಾಗಮ್ಮ ಶಂಕರೇಗೌಡ ಅವರು ತಮ್ಮ 2.20 ಎಕರೆ ಭೂಮಿಯಲ್ಲಿ ಬೆಳೆದಿದ್ದ ತಂಬಾಕು ಹಾಗೂ ಅಡಿಕೆ ಬೆಳೆ ನಾಶವಾಗಿದ್ದು ಕಿರನಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಹಾಗಾಗಿ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಹರಿಲಾಪುರ ಗ್ರಾಮದ ಮೊಗೆಕೆರೆಯೂ ಕಿರನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಕಳೆದ ವರ್ಷ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳೆತ್ತುವುದು ಸೇರಿದಂತೆ ಕೆರೆ ಕೋಡಿ ಅಭಿವೃದ್ಧಿ ಮತ್ತು ದುರಸ್ತಿ ಕಾಮಗಾರಿಗೆ ಅನುಮೋದನೆ ಗೊಂಡು ಕಾಮಗಾರಿ ನಡೆಸಲಾಗಿತ್ತು ಆದರೆ ಎನ್ಆರ್ಇಜಿ ಯಡಿ ಕೆಲಸ ಮಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕೆರೆಯನ್ನು ಸರಿಯಾಗಿ ಹೂಳೆತ್ತುವುದು ಹಾಗೂ ಕೋಡಿ ದುರಸ್ತಿ ಮಾಡುವ ಕೆಲಸವನ್ನು ಅವೈಜ್ಞಾನಿಕವಾಗಿ ಹಾಗೂ ಕಳಪೆ ಕಾಮಗಾರಿ ಮಾಡಿದ ಹಿನ್ನೆಲೆಯಲ್ಲಿ ಹೆಚ್ಚಾಗಿ ಮಳೆನೀರು ಹರಿದು ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಕೆರೆ ಏರಿ ಹಾಗೂ ಕೋಡಿಯ ಮೇಲೆ ಹರಿದು ಲಕ್ಷಾಂತರ ರೂಪಾಯಿ ಮೌಲ್ಯದ ತಂಬಾಕು ಹಾಗೂ ಅಡಿಕೆ ಬೆಳೆ ನಾಶವಾಗಿದ್ದು ಕೂಡಲೇ ತಾಲ್ಲೂಕು ಆಡಳಿತ, ತಂಬಾಕು ಮಂಡಳಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಪರಿಹಾರ ನೀಡಬೇಕು ಹಾಗೂ ಕೂಡಲೇ ಕೆರೆ ಕೋಡಿ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Back to top button
error: Content is protected !!