ಕುಶಾಲನಗರ, ಜು 22:ಮುಳ್ಳುಸೋಗೆ ಗ್ರಾಮ ಪಂಚಾಯಿತಿಯು ಪುರಸಭೆಯಾಗಿ ಮೇಲ್ದರ್ಜೆಗೇರಿ ಸುಮಾರು ಒಂದುವರೆ ವರ್ಷ ಕಳೆದರೂ ಈ ಭಾಗದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಅತಂತ್ರ ಸ್ಥಿತಿಯಲ್ಲಿರುವುದು ವಿಪರ್ಯಾಸ! ಈ ಹಿಂದೆ ಇದ್ದಂತಹ ಶಾಸಕರು ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಮುಳ್ಳುಸೋಗೇ ಗ್ರಾಮ ಪಂಚಾಯಿತಿ ಕೆಲವೊಂದು ಸದಸ್ಯರನ್ನು ಪಕ್ಷಾತೀತವಾಗಿ ನಾಮನಿರ್ದೇಶನ ಮಾಡುವುದಾಗಿ ಮಾಧ್ಯಮ ಮುಖಾಂತರ ಬಹಿರಂಗವಾಗಿ ತಿಳಿಸಿದರು. ಆದರೆ ಈಗಿರುವ ಜನಪ್ರತಿನಿದಿನಗಳು ತಮ್ಮ ಜಾತಿ ಪ್ರಭಾವವನ್ನು ಎತ್ತಿ ಇಡಿದು ಪುರಸಭೆ ಹಾಗೂ ಕುಶಾಲನಗರ ಯೋಚನಾ ಪ್ರಾಧಿಕಾರಕ್ಕೆ ನಾಮನಿರ್ದೇಶನ ಆಗಿರುವುದು ಬೇಸರದ ಸಂಗತಿ, ಪ್ರಸ್ತುತ ಅಧಿಕಾರಕ್ಕೆ ಬಂದು ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಹೊರತು ಪಡಿಸಿ ” ಜನರ ಸೇವೆಗೆ ಕೈಗೆಟಕುವಂತ ಯುವ ಸಮುದಾಯವನ್ನು ಗುರುತಿಸದಿರುವುದು ತುಂಬಾ ಬೇಸರದ ಸಂಗತಿ. ಸುಮಾರು ಹದಿನೈದು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಮುಳ್ಳುಸೋಗೆ,ಗುಮ್ಮನ ಕೊಲ್ಲಿ ಗೊಂದಿ ಬಸವನಹಳ್ಳಿ, ಗ್ರಾಮದ ಜನತೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಕುಶಾಲನಗರ ಪುರಸಭೆ ವಿಫಲರಾಗಿದ್ದಾರೆ.
ಇಲ್ಲಿಯವರೆಗೆ ಯಾವುದೇ ಒಂದು ಕಾಮಗಾರಿಗಳು ಈ ಭಾಗದಲ್ಲಿ ನಡೆದಿಲ್ಲ. ಈ ಭಾಗದ ಸಾರ್ವಜನಿಕರ ಹಿತಾದೃಷ್ಟಿಯಿಂದ ದಯಮಾಡಿ ಇನ್ನೂ ಆರು ತಿಂಗಳಲ್ಲಿ ಸನ್ಮಾನ್ಯ ಶಾಸಕರು ಚುನಾವಣೆ ನಡೆಸುವಲ್ಲಿ ತಮ್ಮದೇ ಆದ ಒಂದು ದಿಟ್ಟ ಹೆಜ್ಜೆಯನ್ನು ಇಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಕುಶಾಲನಗರ ಪಂಚಾಯಿತಯು ಆರು ವರ್ಷಕಳೆದರು ಇನ್ನೂ ಚುನಾವಣೆ ಕಾಣದಿರುವುದು ಸಂವಿಧಾನಕ್ಕೆ ಮಾರಕ. ಈ ಭಾಗದ ಜನಪ್ರತಿನಿಧಿಗಳ ಅಧಿಕಾರ ದಾಹಕ್ಕಾಗಿ ಇತ್ತ ಮುಳ್ಳುಸೋಗೆ ಅತ್ತ ಕುಶಾಲ್ ನಗರ ಪಂಚಾಯಿತಿಯ ಸಾರ್ವಜನಿಕರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪ್ರಾಥಮಿಕವಾಗಿ ಪರಿಶೀಲನೆ ಮಾಡಿ ಸನ್ಮಾನ್ಯ ಹಾಲಿ ಶಾಸಕರು ಹಾಗೂ ಈಗ ಇರುವಂತಹ ಸರಕಾರವು ಇತ್ತ ಗಮನಿಸಬೇಕಾಗಿ ಗ್ರಾಮದ ಜನತೆಯ ಪರ ವಿನಂತಿಸಿಕೊಳ್ಳುತ್ತೇನೆ. ಸಮಸ್ಯೆಗೆ ಪರಿಹಾರ ದೊರಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲು ಈ ಭಾಗದ ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ಮಾಜಿ ಸದಸ್ಯರು ತೀರ್ಮಾನಿಸಿದ್ದಾರೆ.
Back to top button
error: Content is protected !!