ಕುಶಾಲನಗರ, ಜು 17:ಕುಶಾಲನಗರದ ಬೈಪಾಸ್ ರಸ್ತೆಯಲ್ಲಿ ಇರುವ ನಂ.19722ನೇ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದ್ದೋದೇಶ ಸಹಕಾರ ಸಂಘ ನಿಯಮಿತ 2023 -24 ರಲ್ಲಿ 412.71 ಕೋಟಿ ರೂಪಾಯಿ ವಾರ್ಷಿಕ ವ್ಯವಹಾರದಲ್ಲಿ ರೂ 3.04 ಕೋಟಿ ಲಾಭಗಳಿಸಿದೆ ಮತ್ತು ಶೇ.25 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಟಿ.ಆರ್.ಶರವಣಕುಮಾರ್ ತಿಳಿಸಿದರು.
ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ವರ್ಷ ಸಾಲ ವಸೂಲಾತಿ ಶೇ.95.12 ರಷ್ಟು ಆಗಿದೆ. 2022-23ನೇ ಸಾಲಿನಲ್ಲಿ 1305 ಸದಸ್ಯರಿಂದ ರೂ.3.45 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದ್ದು, ಈಗ 1355 ಸದಸ್ಯರನ್ನು ಹೊಂದಿದ್ದು ಪಾಲ ಬಂಡವಾಳ ರೂ.3.22 ಕೋಟಿ ಸಂಗ್ರಹಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ 59.36 ಕೋಟಿ ಠೇವಣಿ ಸ್ವೀಕರಿಸಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ರೂ 3.31 ಕೋಟಿ ಹೆಚ್ಚಾಗಿದೆ. ಸಂಘದ ದುಡಿಯುವ ಬಂಡವಾಳವು ರೂ. 70.35 ಕೋಟಿಯಿಂದ ರೂ 79.38 ಕೋಟಿಗೆ ಹೆಚ್ಚಿದೆ.
ಸಂಘದಲ್ಲಿ ವಿವಿಧ ಠೇವಣಿಗಳಿಂದ ರೂ.7.77 ಕೋಟಿ ಸಂಗ್ರಹವಿದ್ದು, ಇದರಲ್ಲಿ ಕ್ಷೇಮ ನಿಧಿ ರೂ.2.88 ಕೋಟಿ, ನಿವೇಶನ ಮತ್ತು ಕಟ್ಟಡ ಖರೀದಿ ನಿಧಿ ರೂ 2.07 ಕೋಟಿ, ಮರಣ ನಿಧಿ ರೂ 30.14 ಲಕ್ಷ ಹಾಗೂ ಇತರೇ ನಿಧಿಗಳು ರೂ 2.52 ಕೋಟಿ ಇದೆ ಎಂದು ತಿಳಿಸಿದರು.
ಸಂಸ್ಥೆಯಿಂದ ವನಸಿರಿ ಯೋಜನೆಯಡಿ ವಿವಿಧ ಸ್ಥಳಗಳಲ್ಲಿ 500ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಕಳೆದ 2 ವರ್ಷಗಳಿಂದ ಹಲವು ಗಿಡಗಳನ್ನು ನೆಟ್ಟು ಬೆಳಸಲಾಗಿದೆ. ಕೂಡ್ಲುರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಬಾಕಸ್ ಪುಸ್ತಕ ಮತ್ತು ಸಾಮಾಗ್ರಿಗಳನ್ನು 40 ಸಾವಿರ ವೆಚ್ಚ ಮಾಡಿದ್ದೇವೆ ಎಂದು ತಿಳಿಸಿದರು.
ಸಂಘವು ಸಾಮಾಜಿಕ ಕೆಲಸಗಳಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ ಶಿಕ್ಷಕರುಗಳ ಕೋರಿಕೆಯಂತೆ ಎರಡು ಕಡೆಗಳಲ್ಲಿ ಅಂದಾಜು 4 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯಲ್ಲಿ ಒಬ್ಬ ಸದಸ್ಯನಿಗೆ ಗರಿಷ್ಠ 2.10 ಕೋಟಿ ಸಾಲ ನೀಡಲು ಅವಕಾಶವಿದೆ. ಸಂಸ್ಥೆಯಲ್ಲಿ ವಾಹನ, ಕೈಗಾರಿಕೆ, ಮನೆ ನಿರ್ಮಾಣಕ್ಕೆ, ನಿವೇಶನ ಖರೀದಿಗೆ, ವಿದ್ಯಾರ್ಥಿಗಳಿಗೆ ಎಜುಕೇಷನ್ ಲೋನ್, ಮಹಿಳೆಯರಿಗೆ ಸ್ವಸಹಾಯ ಸಂಘಗಳ ಸಾಲವನ್ನು ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಸುಭದ್ರವಾದ ಚಿಟ್ ಪಂಡ್ ಕೂಡ ನಡೆಸಲಾಗುತ್ತಿದೆ ಎಂದು ಅಧ್ಯಕ್ಷ ಶರವಣಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೊನ್ಸ್, ನಿರ್ದೇಶಕರಾದ ಎಂ.ಎಂ.ಶಾಹಿರ್, ಎನ್.ಇ.ಶಿವಪ್ರಕಾಶ್, ಎಂ.ವಿ.ನಾರಾಯಣ, ವಿ.ಸಿ.ಅಮೃತ್, ಎಲ್.ನವೀನ್, ಕೆ.ಪಿ.ಶರತ್, ಕವಿತಾ, ಕೃತಿಕಾ ಪೊನ್ನಪ್ಪ, ಕೀರ್ತಿ ಲಕ್ಷ್ಮಿ, ಆರ್.ಕೆ.ನಾಗೇಂದ್ರ ಬಾಬು, ಸಿಇಒ ಬಿ.ಡಿ.ಶ್ರೀಜೇಶ್ ಮತ್ತು ವ್ಯವಸ್ಥಾಪಕ ಆರ್.ರಾಜು ಉಪಸ್ಥಿತರಿದ್ದರು.
ವಾರ್ಷಿಕ ಮಹಾಸಭೆ : ಸಂಘದ 2023 -24 ನೇ ಸಾಲಿನ ವಾರ್ಷಿಕ ಮಹಾಸಭೆಯು ಜುಲೈ 21 ರ ಭಾನುವಾರ ಪೂರ್ವಾಹ್ನ 11 ಗಂಟೆಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಸಲಿದ್ದೇವೆ. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷರು ಮನವಿ ಮಾಡಿದರು. ಸಭೆಯ ಊಟದ ಭತ್ಯೆ ಎಂದು ಸದಸ್ಯರಿಗೆ ರೂ.300 ನೀಡಲಾಗುತ್ತದೆ ಎಂದರು.
Back to top button
error: Content is protected !!