ಪಿರಿಯಾಪಟ್ಟಣ, ಜು 06: ಬಾಬು ಜಗಜೀವನರಾಂ ಈ ನಾಡು ಕಂಡ ಧೀಮಂತ ನಾಯಕ ಅವರು ಹಸಿರು ಕ್ರಾಂತಿಯ ಮೂಲಕ ಜನರ ಹಸಿವು ತಣಿಸಿದ್ದಾರೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಬಣ್ಣಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 38ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ ಆಹಾರದ ಕೊರತೆಯಿದ್ದು, ವಿದೇಶಗಳಿಂದ ಆಹಾರ ಸಾಮಗ್ರಿಗಳನ್ನು ಎರವಲು ಪಡೆಯುವ ಸ್ಥಿತಿ ಎದುರಾಗಿತ್ತು. ಆಗ ಕೃಷಿ ಕ್ಷೇತ್ರದಲ್ಲಿ ಬಾಬು ಜಗಜೀವನರಾಂ ತಂದ ಕ್ರಾಂತಿಕಾರಕ ಬದಲಾವಣೆಗಳು ಆಹಾರ ಸ್ವಾವಲಂಬನೆ ಸಾಧಿಸಲು ಸಹಾಯವಾಯಿತು ಈ ಕಾರಣಕ್ಕಾಗಿ ಅವರನ್ನು
ಹಸಿರು ಕ್ರಾಂತಿಯ ಹರಿಕಾರ ಎಂದು ದೇಶ ಕೂಗಿ ಹೇಳಿತು. ಬಾಬೂಜಿಯವರು ಸರಳ ಸಜ್ಜನಿಕೆಗೆ ಹೆಸರಾದವರು ಅವರು ಅಧಿಕಾರಕ್ಕಾಗಿ ಎಂದು ಆಸೆ ಪಟ್ಟವರಲ್ಲ, ಹಾಗಾಗಿ ಇವರು ಉಪ ಪ್ರಧಾನಿಯಾಗಿದ್ದಾಗ ಜಾರಿಗೂಳಿಸಿದ ಯೋಜನೆಗಳು ಈ ನಾಡಿನ ದಲಿತರು, ಬಡವರು, ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ದಾರಿದೀಪವಾಗಿವೆ ಎಂದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರ ಕೆಂಪರಾಜು ಮಾತನಾಡಿ ಸಮಾಜದಲ್ಲಿರುವ ಎಲ್ಲಾ ಜಾತಿಯ ಬಡವರ ಉದ್ದಾರವಾಗದೆ ದೇಶದ ಅಭಿವದ್ಧಿ ಸಾಧ್ಯವಿಲ್ಲ. ದೇಶದ ರೈತರು ಆಧುನಿಕ ಬೇಸಾಯ ಪದ್ದತಿ ಅಳವಡಿಸಿ ಕೊಳ್ಳುವವರೆಗೆ ದೇಶದಲ್ಲಿ ರೈತರ ಅಭಿವೃದ್ಧಿಯಾಗುವುದಿಲ್ಲ ಎಂದು ಹೇಳುತ್ತಿದ್ದ ಜಗ ಜೀವನರಾಂ ಅವರು ದೇಶದ ಕಷಿ ಸಚಿವರಾಗಿ ಕ್ರಾಂತಿಯನ್ನೇ ಸಷ್ಠಿಸಿದ ವ್ಯಕ್ತಿ. ಇವರ ಅವಧಿಯಲ್ಲಿ ರಾಸಾಯನಿಕ ಗೊಬ್ಬರ ಪದ್ದತಿಯನ್ನು ಪರಿಚಯಿಸಿ, ಆಧುನಿಕ ಬೇಸಾಯ ಪದ್ದತಿ ಅಳವಡಿಸ ಲಾಯಿತು. ದೇಶದಲ್ಲಿ ಆಹಾರದ ಉತ್ಪಾದನೆ ಅಧಿಕಗೊಂಡು ಕಷಿ ಉತ್ಪನ್ನಗಳನ್ನು ಬೇರೆ ದೇಶದಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ, ವಿದೇಶಗಳಿಗೆ ರಫ್ತು ಮಾಡುವಷ್ಟು ಅಭಿವೃದ್ಧಿ ಕಂಡಿತು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕುಂಜಿ ಅಹಮದ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಬಸವರಾಜು, ಪ್ರಸಾದ್, ಸೋಮಯ್ಯ, ಧರ್ಮ ರಾಜ್, ಸಣ್ಣಸ್ವಾಮಿ, ಮಮತಾ, ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ್ ವಾರ್ಡನ್ ಗಳಾದ ಮೋಹನ್ ಕುಮಾರ್, ಮಹಾದೇವ್, ಕೃಷ್ಣೇಗೌಡ, ಆರತಿ, ಲಲಿತಮ್ಮ, ಪ್ರೀಮಾ ಡಿಸೋಜ ಸೇರಿದಂತೆ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Back to top button
error: Content is protected !!