ಕುಶಾಲನಗರ ಜುಲೈ ೧ : ವೈದ್ಯರ ದಿನಾಚರಣೆಯ ಅಂಗವಾಗಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯಾರ್ಥಿ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ಯಾರಾ ಮೆಡಿಕಲ್ ತಂತ್ರಜ್ಞರ ಸಹಕಾರದಿಂದ ಮಾತ್ರ ವೈದ್ಯ ರೋಗಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಸಾಧ್ಯ ಎಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂಧನ್ ತಿಳಿಸಿದರು.
ಅವರು ವಿದ್ಯಾರ್ಥಿ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಿದ್ಧ ವೈದ್ಯರಾದ ಡಾ. ಬಿದನ್ ಚಂದ್ರರಾಯ್ ಅವರ ಜನ್ಮದಿನದ ನೆನಪಿಗಾಗಿ ಭಾರತ ಸರ್ಕಾರವು ೧೯೯೧ರ ಜುಲೈ೧ ಅನ್ನು ರಾಷ್ಟ್ರೀಯ ವೈದ್ಯರ ದಿನವೆಂದು ಘೋಷಿಸಿದೆ ಎಂದು ಮಾಹಿತಿ ಒದಗಿಸಿದ ಅವರು ನಿಸ್ವಾರ್ಥ ಸೇವೆಯನ್ನು ಒದಗಿಸಿದ್ದಲ್ಲಿ ಮಾತ್ರ ವೈದ್ಯರ ಸೇವೆ ಪರಿಪೂರ್ಣ ಎಂದರು.
ಕಾರ್ಯಕ್ರಮದಲ್ಲಿ ವೈದರಾದ ಡಾ. ಶಿವಕುಮಾರ್ ಡಾ. ಪ್ರಾಣೇಶ್ ಡಾ. ಕೀರ್ತಿರಾಜ್ ಡಾ.ಪ್ರತಿಭಾ ಉಪನ್ಯಾಸಕಿಯಾರಾದ ಭವ್ಯಶ್ರೀ ಡಿಎ, ಶ್ರೀ ವಿದ್ಯಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಾನಸ ಕೆ.ಎಸ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ವಂದಿಸಿದರು
Back to top button
error: Content is protected !!