ಪ್ರಕಟಣೆ

ಪಠ್ಯದಲ್ಲಿ ವೀರಶೈವ ಪದಬಿಟ್ಟ ಸರ್ಕಾರ: ಒಡೆದು ಆಳುವ ನೀತಿ ಆರೋಪ, ಆಕ್ರೋಷ

ಸೋಮವಾರಪೇಟೆ, ಜು 01: ಪಠ್ಯದಲ್ಲಿ ವೀರಶೈವ ಪದಬಿಟ್ಟ ಸರ್ಕಾರ, ಒಡೆದು ಆಳುವ ನೀತಿಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಆಕ್ರೋಶ.
ಈಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಹಿಂದೆ ವೀರಶೈವ ಹಾಗೂ ಲಿಂಗಾಯತ ಎಂದು ಒಡಕು ಮೂಡಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಪುನಃ ಅಧಿಕಾರಕ್ಕೆ ಬಂದ ತಕ್ಷಣ ಪಠ್ಯದಲ್ಲಿ ವೀರಶೈವ ಪದವನ್ನು ತೆಗೆಯುವ ಮೂಲಕ ತಮ್ಮ ಒಡೆದು ಆಳುವ ನೀತಿಯನ್ನು ಮುಂದುವರೆಸಿದೆ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರವು ನೂತನವಾಗಿ ಪರಿಷ್ಕರಿಸುವ 9 ನೆ ತರಗತಿಯ ಸಮಾಜವಿಜ್ಞಾನ ಪಠ್ಯ ಪುಸ್ತಕದಲ್ಲಿ ‘ ವಿಶ್ವಗುರು ಬಸವಣ್ಣನವರು – ಸಾಂಸ್ಕೃತಿಕ ನಾಯಕ ಎಂಬ ಪಾಠದಲ್ಲಿ ವೀರಶೈವ ಎಂಬ ಪದವನ್ನು ತೆಗೆದುಹಾಕಲಾಗಿದೆ ಎಂದು ಮಹೇಶ್ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಮಾನ್ಯ ಮುಖ್ಯ ಮಂತ್ರಿಗಳು ಹಾಗು ಶಿಕ್ಷಣ ಸಚಿವರು ತಕ್ಷಣವೇ ಗಮನಹರಿಸಿ ಆಗಿರುವ ತಪ್ಪನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಈ ರೀತಿ ಅವೈಜ್ಞಾನಿಕ ಹಾಗು ಇತಿಹಾಸಕ್ಕೇ ಮತ್ತು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪರಂಪರೆಗೆ ಧಕ್ಕೆಯಾಗುವ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬಬಾರದು ಎಂದು ತಿಳಿಸಿದ್ದಾರೆ.
ಅರಿವನ್ನೇ ಗುರುವಾಗಿಸಿಕೊಂಡಿದ್ದ ಬಸವಣ್ಣನವರು ಇಷ್ಟ ಲಿಂಗದ ವಿನೂತನ ಪರಿಕಲ್ಪನೆ ಜಾರಿಗೆ ತಂದರು ಪ್ರಕಟಿಸಿದ್ದಾರೆ ಇದು ತಪ್ಪು . ಬಸವಣ್ಣನವರು ತಮ್ಮ ವಚನಗಳಲ್ಲಿ ಪ್ರತಿಯೊಬ್ಬರ ಅಂತರಂಗದಲ್ಲಿರುವ ಪರಮಾತ್ಮನ ಅರಿವೆ ಗುರುವಾಗಬೇಕು,ಅರಿವು ಪ್ರತಿಯೊಬ್ಬರ ಬದುಕಿಗೆ ನಿತ್ಯ ದಾರಿದೀಪವಾಗ ಬೇಕೆಂದು ತಮ್ಮ ಹಲವು ವಚನಗಳಲ್ಲಿ ಪ್ರತಿಪಾದಿಸಿದ್ದಾರೆ ಆದ್ದರಿಂದ ಸರ್ಕಾರ ತಕ್ಷಣವೇ ಆಗಿರುವ ತಪ್ಪನು ಸರಿಪಡಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!