ಕುಶಾಲನಗರ, ಜೂ 22: ದಿನಾಂಕ: 19-06-2024 ರಂದು ಅಫೈಲ್ ಪಿ ಹೆಚ್ ವ್ಯಾಪಾರ ವೃತ್ತಿ ಹಾಗೂ ನೆಲ್ಲಿಹುದಿಕೇರಿ ಗ್ರಾಮಪಂಚಾಯ್ತಿ ಸದಸ್ಯ ವಾಸ ನೆಲ್ಲಿಹುದಿಕೇರಿ ಮತ್ತು ಶಾಹುಲ್ ಎಂ ಇ ಮೊಬೈಲ್ ಅಂಗಡಿ ಮಾಲೀಕ, ವಾಸ ಮಾಲ್ದಾರೆ. ಬಾಣಂಗಾಲ, ಸಿದ್ದಾಪುರ ರವರುಗಳು ಸಾಮಾಜಿಕ ಜಾಲತಾಣ (Facebook/ Whatsapp/ X/ Instagram & etc) ಗಳಲ್ಲಿ “ಪಿರಿಯಾಪಟ್ಟಣ ಮತ್ತು ಹುಣಸೂರು ಮಾರ್ಗವಾಗಿ ವಿರಾಜಪೇಟೆ ಮತ್ತು ಸಿದ್ದಾಪುರಕ್ಕೆ ಬರುವ ಪ್ರಯಾಣಿಕರು ರಾತ್ರಿಯ ವೇಳೆ ಸಂಚರಿಸುವಾಗ ಬಹಳ ಜಾಗೃತರವಾಗಿ ಸಂಚರಿಸುವುದು. ನೆನ್ನೆ ತಡರಾತ್ರಿ ನೆಲ್ಯಾಹುದಿಕೇರಿ ಗ್ರಾಮದ ಯುವಕರ ಕಾರನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ದರೋಡೆ ಮಾಡಲು ಪ್ರಯತ್ನಿಸಿದ್ದಾರೆ. ಅದೃಷ್ಟವತಾತ್ ಕಾರು ಚಾಲಕನ ಜಾಣೆಯಿಂದ ಅವರಿಂದ ತಪ್ಪಿಸಿಕೊಂಡು. ಕಾರನ್ನು ಬದಲಿ ಮಾರ್ಗದಲ್ಲಿ ಚಾಲನೆ ಮಾಡಿ ಬಂದು ತಮ್ಮ ಊರು ಸೇರಿದ್ದಾರೆ. ಹಾಗಾಗಿ ದಯಮಾಡಿ ಮುಂದಿನ ದಿನಗಳಲ್ಲಿ ಮಧ್ಯರಾತ್ರಿಯ ನಂತರ ಬರುವ ವಾಹನಗಳು ಬಹಳ ಜಾಗರೂಕರವಾಗಿ ಬರಬೇಕು. ಒಂಟಿ ವಾಹನವೇ ಅವರ ಟಾರ್ಗೆಟ್ ಆಗಿದ್ದು ಪ್ರಯಾಣಿಕರಿಂದ ಅವರು ದರೋಡೆ ಮಾಡಲು ಯತ್ನಿಸುತ್ತಿದ್ದಾರೆ. ಹಾಗಾಗಿ ತಡರಾತ್ರಿ ಬರುವ ఒంటి ವಾಹನಗಳಾಗಿದ್ದಲ್ಲಿ ಬದಲಿ ಮಾರ್ಗದಲ್ಲಿ ಚಲಿಸಿ ನಿಮ್ಮ ಊರಿಗೆ ಸುರಕ್ಷಿತವಾಗಿ ತಲುಪಿ, ಯಾವುದೇ ಕಾರಣಕ್ಕೂ ಅರಣ್ಯದೊಳಗೆ ತಡರಾತ್ರಿಯಲ್ಲಿ ಬರುವಂತಹ ಸಾಹಸಕ್ಕೆ ಕೈಹಾಕಿ ತೊಂದರೆಗೆ ಸಿಲುಕಬೇಡಿ. ಪಿರಿಯಾಪಟ್ಟಣ- ಮಾಲ್ದಾರೆ- ಸಿದ್ದಾಪುರ, ಪಿರಿಯಾಪಟ್ಟಣ- ವಿರಾಜಪೇಟೆ ಮಾರ್ಗವಾಗಿ ರಾತ್ರಿ 12 ಗಂಟೆಯ ಮೇಲೆ ವಾಹನವನ್ನು ಚಲಿಸದೆ ಇರುವುದೇ ಒಳ್ಳೆಯದು.” ಎಂಬುದಾಗಿ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿರುವುದು ತಂಡುಬಂದಿರುತ್ತದೆ.
ಈ ಮಾಹಿತಿಯನ್ನು ಪರಿಶೀಲಿಸಲಾಗಿ ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಮಹಿಳೆಯ ಸಂಬಂಧಿಕರು ತಡರಾತ್ರಿ ಹುಡುಕುತ್ತಿರುವುದನ್ನು ತಪ್ಪಾಗಿ ಗ್ರಹಿಸಿ ಈ ಮೇಲಿನ ರೀತಿಯಾಗಿ ಸುಳ್ಳು ಮಾಹಿತಿಯನ್ನು ಸಾಮಾಜಿಕ ಕಾಲತಾಣದಲ್ಲಿ ಹಂಚಿಕೊಂಡಿರುತ್ತಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮೇಲ್ಕಂಡ ಮಾಹಿತಿಯನ್ನು ಹಂಚಿಕೊಂಡ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆಯನ್ನು ಸಹ ನೀಡಲಾಗಿರುತ್ತದೆ
ಪಿರಿಯಾಪಟ್ಟಣ- ಮಾಲ್ದಾರೆ- ಸಿದ್ದಾಪುರ, ಪಿರಿಯಾಪಟ್ಟಣ/ಹುಣಸೂರು-ಗೋಣಿಕೊಪ್ಪ- ವಿರಾಜಪೇಟೆ ಮಾರ್ಗದಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆದಿರುವುದಿಲ್ಲ & ಸಾರ್ವಜನಿಕರು ಯಾವುದೇ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ.
(Facebook/ Whatsapp/ X/ Instagram & etc) ಯಾವುದೇ ರೀತಿಯ ಸಂದೇಶ/ಭಾವಚಿತ್ರ/ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಸತ್ಯ-ಅಸತ್ಯತೆಯನ್ನು ಪರಿಶೀಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಿದೆ ಹಾಗೂ ಸಾಮಾಜಿಕ ಜಾಲತಾಣಗಳ ಸಂಪೂರ್ಣ ನಿಗಾವಹಿಸಿದ್ದು, ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ ಸುಳ್ಳು ಸುದ್ದಿಯ ಪೋಸ್ಟ್‌ಗಳನ್ನು ಹರಿಬಿಟ್ಟು ಅಪಪ್ರಚಾರ ಮಾಡುವ & ಆತಂಕ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮತ್ತು ರಸ್ತೆಯಲ್ಲಿ ಯಾವುದೇ ಅಪಘಾತ ಸಂಭವಿಸಿದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತೇವೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.
Back to top button
error: Content is protected !!