ಕುಶಾಲನಗರ, ಜೂ 21: ಕುಶಾಲನಗರ 1ನೇ ಬ್ಲಾಕ್, ದಂಡಿನಪೇಟೆಯಲ್ಲಿ ಹಳೆಯದಾದ ಹೆಂಚಿನ ಕಟ್ಟಡವು ತುಂಬಾ ಶಿಥಿಲಗೊಂಡಿದ್ದು ಕಟ್ಟಡ ತೆರವುಗೊಳಿಸಲು ಪುರಸಭೆ ವತಿಯಿಂದ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಸರ್ವೆ ನಂಬರ್ 22/1ಎ, 22/22, 22/32, 22/42, 22/52, 22/62, 22/72, 78/12, 78/22, 78/32, 136/12, 136/22 ಹಳೆಯದಾದ ಹೆಂಚಿನ ಕಟ್ಟಡವು ತುಂಬಾ ಶಿಥಿಲಗೊಂಡಿದ್ದು ಪ್ರಸ್ತುತ ಮಳೆಗಾಲವಿರುವುದರಿಂದ ಯಾವುದೇ ಸಮಯದಲ್ಲಿಯೂ ಬೀಳುವ ಹಂತದಲ್ಲಿರುವುದು ಕಂಡು ಬಂದಿರುತ್ತದೆ. ಸದರಿ ಮನೆಯಲ್ಲಿ ಕೆಲವು ಜನರು ವಾಸವಾಗಿದ್ದು ಪ್ರಾಣ ಹಾನಿಯಾಗುವ ಸಂಭವವಿರುವುದರಿಂದ ಈ ನೋಟೀಸ್ ತಲುಪಿದ ಕೂಡಲೇ ಸದರಿ ಬೀಳುವ ಹಂತದಲ್ಲಿರುವ ಕಟ್ಟಡದಿಂದ ವಾಸವಾಗಿರುವ ಜನರನ್ನು ಖುಲ್ಲಾಪಡಿಸಿ ಕಟ್ಟಡವನ್ನು ತೆರೆವುಗೊಳಿಸುವಂತೆ ನೋಟಿಸ್ ನಲ್ಲಿ ತಿಳಿಯಪಡಿಸಿದೆ. ತಪ್ಪಿದ್ದಲಿ ಮುಂದೆ ಸಂಭವಿಸುವ ಪ್ರಾಣಹಾನಿ ಹಾಗೂ ಕಷ್ಟನಷ್ಟಗಳಿಗೆ ಮಾಲೀಕರನ್ನು ನೇರ ಹೊಣೆಗಾರರನ್ನಾಗಿಸಿ ಕಾನೂನು ರೀತ್ಯಾ ಕ್ರಮವಹಿಸಲಾಗುವುದು ಎಂಬುದಾಗಿ ಎಚ್ಚರಿಸಲಾಗಿದೆ.
Back to top button
error: Content is protected !!