ಕುಶಾಲನಗರ, ಜೂ 23: ಪಿರಿಯಾಪಟ್ಟಣ ತಾಲೂಕಿನ ಮಂಚದೇವನಹಳ್ಳಿಯ ನಿವಾಸಿ ಚಿಕ್ಕ ಹನುಮ ನಾಯಕ ಅವರ ಪತ್ನಿ 82 ವರ್ಷದ ಈರಮ್ಮ ಅವರಿಗೆ ಅನುಕೂಲವಾಗುವಂತೆ ಹತ್ತಿರದಲ್ಲಿ ಶೌಚಾಲಯ ನಿರ್ಮಿಸಿಕೊಡಬೇಕಿದೆ ಎಂದು ಅವರ ಹಿರಿಯ ಪುತ್ರಿ ಕುಶಾಲನಗರದ ಶಿವಮ್ಮ ಒತ್ತಾಯಿಸಿದ್ದಾರೆ.
ನಡೆದಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿರುವ ಈರಮ್ಮ ಅವರು ಮಕ್ಕಳಿಂದ ನಿರ್ಲಕ್ಷ್ಯ ಕ್ಕೆ ಒಳಗಾಗಿದ್ದಾರೆ. ಶೌಚಾಲಯಕ್ಕೆ ಮನೆಯ ಹೊರಗಿನ ಶೌಚಗೃಹ ಅವಲಂಬಿಸಿದ್ದು ತಿರುಗಾಡಲು ಸಾಧ್ಯವಿಲ್ಲದ ಇವರಿಗೆ ಹತ್ತಿರದಲ್ಲಿ ಶೌಚಾಲಯ ನಿರ್ಮಿಸಿ ವೀಲ್ ಚೇರ್ ಒದಗಿಸಿಕೊಡಲು ಸಂಬಂಧಿಸಿದವರು ಇತ್ತ ಗಮನ ಹರಿಸಬೇಕಿದೆ.
ಈರಮ್ಮ ಅವರ ಸಧ್ಯದ ನಿಕೃಷ್ಟ ಪರಿಸ್ಥಿತಿ ಬಗ್ಗೆ ಸಾಂತ್ವನ ಕೇಂದ್ರ, ಪೊಲೀಸ್ ಇಲಾಖೆ ಪಂಚಾಯ್ತಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದಿದ್ದರೂ ಯಾರೂ ಕೂಡ ಸೂಕ್ತವಾಗಿ ಸ್ಪಂದಿಸಿಲ್ಲ. ಗಂಡು ಮಕ್ಕಳು, ಸೊಸೆಯರಿದ್ದರೂ ಕೂಡ ಈರಮ್ಮ ಅವರ ಆರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಆರೋಪಿಸಿರುವ ಶಿವಮ್ಮ, ತಮ್ಮ ತಾಯಿ ಈರಮ್ಮ ಅವರ ದಿನಚರಿ ಸಮಸ್ಯೆಗಳಿಗೆ ಜಿಲ್ಲಾಡಳಿತ, ಪಂಚಾಯ್ತಿ ಸೂಕ್ತವಾಗಿ ಸ್ಪಂದಿಸಿ ಅಗತ್ಯ ಕ್ರಮವಹಿಸಬೇಕಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಅಗ್ರಹಿಸಿದ್ದಾರೆ.
Back to top button
error: Content is protected !!