ಸೋಮವಾರಪೇಟೆ, ಮೇ 31:- ಕೊಡಗಿನ ಮಹಿಳೆಯೋರ್ವರು ಇವರೆಸ್ಟ್ ಶಿಖರವೇರುವ ಮೂಲಕ ಸಾಹಸ ಮೆರೆದಿದ್ದಾರೆ.
ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಬಡುಬನ ಹಳ್ಳಿಯ ನಿವಾಸಿ ದಿವಂಗತ ಮಲ್ಲಪ್ಪನವರ ಪುತ್ರಿ ಡಾ. ಬಿ.ಎಂ.ಲತಾ ಎವರೆಸ್ಟ್ ಏರುವ ಸಾದನೆ ಮಾಡಿದವರು. ಬೆಂಗಳೂರಿನಲ್ಲಿ ಸ್ತ್ರೀರೋಗ ತಜ್ಞೆ ಯಾಗಿರುವ ಇವರು ಕ್ರೀಡೆಯಲ್ಲಿ ಹಾಗೂ ಟ್ರಕ್ಕಿಂಗ್ ನಲ್ಲಿ ಆಸಕ್ತಿ ಹೊಂದಿದವರು ಇತ್ತೀಚೆಗೆ ಇವರಿಗೆ ಎವರೆಸ್ಟ್ ಶಿಖರ ಏರಬೇಕೆಂಬ ಹಂಬಲ ಶುರುವಾಯಿತು ಅದಕ್ಕಾಗಿ ಬೆಸ್ಕ್ಯಾಂಪ್ ನಡೆಸುವ ನೇಪಾಳ ಮೂಲದ ಕಂಪೆನಿಯೊಂದರ ಮಾರ್ಗದರ್ಶನದಲ್ಲಿ 6 ತಿಂಗಳ ತರಭೇತಿ ಹಾಗೂ ಶ್ರಮದೊಂದಿಗೆ,ಪ್ರತಿ ನಿತ್ಯ 10ಕಿ.ಮೀ ಓಡುವುದು,ನಡೆಯುವುದು ಮತ್ತು ಚಿಕ್ಕ ಪುಟ್ಟ ಬೆಟ್ಟಗಳನ್ನು ಹತ್ತುವುದು ಈ ಅಭ್ಯಾಸ ಯಶಸ್ವಿಯಾಗಿ ಮುಗಿಸಿದ ನಂತರ ಏಪ್ರಿಲ್ 28 ರಿಂದ ಮೇ 11ರೊಳಗೆ ಪರ್ವತಾರೋಹಣಕೆ ಸಿದ್ದರಾದರು,ಭಾರತದ ವಿವಿಧೆಡೆಗಳಿಂದ ಬಂದಿದ್ದ ತಂಡಗಳನ್ನು ರಚಿಸಲಾಗಿ ಇವರ ತಂಡದಲ್ಲಿ ಒಟ್ಟು ಎಂಟು ಮಂದಿ ಇವರಿಗೆ 57ವರ್ಷ ಉಳಿದವರು 30,40ವರ್ಷದ ಯುವಕರು.
ಪ್ರತಿನಿತ್ಯ ಹತ್ತರಿಂದ ಹದಿನೈದು ಕಿಲೋಮೀಟರ್ ಏರುವುದು ನಂತರ ವಿಶಾಂತಿಪಡೆಯುವುದು,ಪರ್ವತಾರೋಹಣದ ಧಿರಿಸು ದರಿಸಿದ್ದರು ಸಹ ಕೊರೆಯುವ ಚಳಿಗೆ ಮೈಯೆಲ್ಲಾ ಬೆಂಡಾಗಿಸುತ್ತಿತ್ತು,ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಕೆಲವರು ಹಿಂದಿರುಗಿದ್ದಾರೆ,ನಮ್ಮ ತಂಡದಲ್ಲಿ ನಾನು ಸೇರಿದಂತೆ ಮೂವ್ವರು ಮಾತ್ರ 18,514 ಅಡಿಗಳ ಎತ್ತರ ಏರುವ ಮೂಲಕ ಗುರಿತಲುಪಿದೆವು ಎಂದು ಡಾಕ್ಟರ್ ಲತಾ ತಮ್ಮ ಅನುಭವ ಹಂಚಿಕೊಂಡರು.
Back to top button
error: Content is protected !!