ಕುಶಾಲನಗರ, ಏ 03: ಕಳೆದ ಎರಡು ದಿನಗಳ ಹಿಂದೆ ಬಾಣವಾರ ಸಮೀಪದ ನಿಡ್ತ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿದ ಹೊಸಗುತ್ತಿ ಗ್ರಾಮದಲ್ಲಿ ರೈತನನ್ನು ತುಳಿದು ಸಾಯಿಸಿದ ಪುಂಡಾನೆಯನ್ನು ಹಿಡಿಯಲು ಸರಕಾರಿಂದ ಅರಣ್ಯ ಇಲಾಖೆಗೆ ಅನುಮತಿ ದೊರೆತ ಹಿನ್ನೆಲೆಯಲ್ಲಿ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿಗಳ ತಂಡವು ಪುಂಡಾನೆಯನ್ನು ಹಿಡಿಯುವ ಕಾರ್ಯಾಚರಣೆಯನ್ನು ಬಾಣವಾರ ಮತ್ತು ನಿಡ್ತ ಅರಣ್ಯ ವ್ಯಾಪ್ತಿಯಲ್ಲಿ ಕೈಗೊಂಡಿದ್ದಾರೆ.
ಸರಕಾರ ಆದೇಶದನ್ವಯ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳ ಸೂಚನೆ ಮೇರೆಗೆ ಮಂಗಳವಾರ ರಾತ್ರಿ ಪುಂಡಾನೆಯು ಬಾಣವಾರ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು 3 ತಂಡಗಳಾಗಿ ಆ ಕಾಡಾನೆಯನ್ನು ಗುರುತಿಸಿ ಅದಕ್ಕೆ ಅರವಳಿಕೆ ಮದ್ದನ್ನು ಹೊಡೆಯುವ ಸಿದ್ದತೆಯೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಾರ್ಯಚರಣೆಯಲ್ಲಿ ವನ್ಯಜೀವಿ ತಜ್ಞ ಡಾ. ಚಿಟ್ಟಿಯಪ್ಪ, ಡಾ. ರಮೇಶ್ ಸೇರಿದಂತೆ ದುಬಾರೆ ಮತ್ತು ಆನೆಕಾಡಿನ ನುರಿತ ಕಾವಾಡಿಗರು ಸೇರಿದಂತೆ ಸೋಮವಾರಪೇಟೆ ವಲಯ ಅರಣ್ಯ ಇಲಾಖೆಯ ವಿಭಾಗದ ಸಿಬ್ಬಂದಿ, ಶನಿವಾರಸಂತೆ ವಲಯದ ಸಿಬ್ಬಂದಿ, ಬಾಣವಾರ ವಿಭಾಗದ ಸಿಬ್ಬಂದಿಗಳು ಪುಂಡಾನೆ ಸೆರೆಗೆ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.
ಈ ಸಂದರ್ಭ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ್, ಶನಿವಾರಸಂತೆ ವಲಯ ಅರಣ್ಯ ಅಧಿಕಾರಿ ಗಾನಶ್ರಿ ಕಾರ್ಯಚರಣೆ ಸಂದರ್ಭದಲ್ಲಿ ಹಾಜರಿದ್ದರು.
Back to top button
error: Content is protected !!