ಟ್ರೆಂಡಿಂಗ್

ಗಾಂಜಾ ಹಾಗೂ ಎಂಡಿಎಂಎ‌ ಮಾರಾಟ: ಕೇರಳದ ಮೂವರ ಬಂಧನ

ಕುಶಾಲನಗರ, ಏ 03:ಕೊಡಗು ಜಿಲ್ಲಾ ವ್ಯಾಪ್ತಿಯ ಗೊಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ರಮವಾಗಿ ಗಾಂಜಾ ಹಾಗೂ MDMA (Methylen dioxy Methamphetamine) ಮಾದಕ ವಸ್ತು ಮಾರಾಟ/ಸರಬರಾಜು ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರೀ ಆರ್.ಮೋಹನ್‌ ಕುಮರ್, ಡಿಎಸ್‌ಪಿ ವಿರಾಜಪೇಟೆ ಉಪ ವಿಭಾಗ, ಶ್ರೀ ಶಿವರಾಜ ಮುಧೋಳ್ ಸಿಪಿಐ, ಗೋಣಿಕೊಪ್ಪ ವೃತ್ತ ಹಾಗೂ ಶ್ರೀಮತಿ ರೂಪದೇವಿ ಬಿರಾದರ್, ಪಿಎಸ್‌ಐ ಗೋಣಿಕೊಪ್ಪ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 02-04-2024 ರಂದು ತಿತಿಮತಿಯ ಮೈಸೂರು-ವಿರಾಜಪೇಟೆ ಹೆದ್ದಾರಿ ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಸರಬರಾಜು/ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ಧಾಳಿ ನಡೆಸಿ ಕೇರಳ ರಾಜ್ಯ ಮೂಲದ ತಾಮರತೇರಿ ನಿವಾಸಿಗಳಾದ 1) ಮಹಮ್ಮದ್ ಆಶ್ರಫ್, 49 ವರ್ಷ 2) ತಸ್ವೀಕ್, 24 ವರ್ಷ 3) ಅಲ್ಯಾಚ್.ಎ.ಟಿ. 27 ವರ್ಷ ಎಂಬುವವರನ್ನು 1 ಕೆ.ಜಿ 400 ಗ್ರಾಂ ಮತ್ತು 2 ಗ್ರಾಂ MDMA (Methylenedioxy Methamphetamine( 2 ಮಾಡಿ ಕ್ರಮ ಕೈಗೊಳ್ಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!