ಸುದ್ದಿಗೋಷ್ಠಿ

ಮಾಜಿ ಮುಖ್ಯಮಂತ್ರಿ‌ ಸದಾನಂದಗೌಡರಿಗೆ ಟಿಕೆಟ್ ನಿರಾಕರಣೆ,‌ ಅಸಮಾಧಾನ

ಕುಶಾಲನಗರ ಮಾ 19: ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರಿಗೆ ಲೋಕಸಭೆ ಟಿಕೆಟ್ ಕೊಡದೆ ಒಕ್ಕಲಿಗರ ಬಗ್ಗೆ ನಿರ್ಲಕ್ಷ ಧೋರಣೆ ತಾಳಲಾಗಿದೆ ಎಂದು ಗೌಡ ಸಮಾಜದ‌ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಬಿಜೆಪಿ ಮುಖಂಡರ ನಡೆಯನ್ನು ಖಂಡಿಸಿದ ಕುಶಾಲನಗರ ಗೌಡ ಸಮಾಜದ ಮುಖಂಡರು, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರಿಗೆ ಲೋಕಸಭೆ ಟಿಕೆಟ್ ನೀಡದೆ ಒಕ್ಕಲಿಗರನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿಯಾಗಿ, ಬಿಜೆಪಿ ಮುಖಂಡರಾಗಿ ಸದಾನಂದ ಗೌಡರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಕೊಡಗು ಜಿಲ್ಲೆಗೆ ಕೂಡ ಅವರಿಂದ ಉತ್ತಮ ಸ್ಪಂದನೆಯಿತ್ತು. ಇಂತಹ ಓರ್ವ ಮುತ್ಸದ್ದಿ ರಾಜಕಾರಣಿಗೆ ಟಿಕೆಟ್ ನೀಡದಿರುವುದು ಖಂಡನೀಯ.

ಸದಾನಂದ ಗೌಡರವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ದೊರಕದಿದ್ದರೆ ಕೊಡಗಿನಲ್ಲೂ ಕೂಡ. ಬಿ.ಜೆ.ಪಿ.ಗೆ ಹಿನ್ನಡೆಯಾಗಲಿದೆ ಎಂದು ಕೊಡಗು ಗೌಡ ಸಮಾಜಗಳ‌ ಒಕ್ಕೂಟದ ಖಜಾಂಚಿ ಆನಂದ್ ಕರಂದ್ಲಾಜೆ ಎಚ್ಚರಿಸಿದರು. ಶೀಘ್ರದಲ್ಲೇ ಕೊಡಗು ಗೌಡ ಒಕ್ಕೂಟಗಳ ಸಭೆ ಕರೆದು‌ ನಮ್ಮನ್ನು ಕಡೆಗಣಿಸಿರುವ ಪಕ್ಷ‌ವನ್ನು ಬೆಂಬಲಿಸದಿರುವ ಕ್ರಮವಹಿಸುವುದಾಗಿ ಅವರು ತಿಳಿಸಿದರು.

ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಮಾತನಾಡಿ, ಇತ್ತ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಣೆ ಮಾಡಿದ್ದು ಸದಾನಂದ ಗೌಡರಿಗೂ ಟಿಕೆಟ್ ನೀಡದೇ ಇರುವುದು ಗೌಡ ಸಮಾಜವನ್ನು ಕಡೆಗಣಿಸಲಾಗಿದೆ.

ನಾವು ರಾಜರ ಬಳಿ ತೆರಳಲಾಗುತ್ತದೆಯೇ ಎಂದೂ ಆತಂಕ ವ್ಯಕ್ತಪಡಿಸಿದರು. ಕಾರ್ಯಕರ್ತರಿಗೆ ಸ್ಪಂದಿಸುತ್ತಿದ್ದ ಸದಾನಂದ ಗೌಡರಿಗೆ ಲೋಕಸಭೆ ಟಿಕೆಟ್ ನೀಡಬೇಕೆಂದು ಇದೇ ಸಂದರ್ಭ ಅವರು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ನಾವು ನಮ್ಮದೆ ಹಾದಿ ಹಿಡಿಯಬೇಕಾಗುತ್ತದೆ ಎಂದರು.

ಗೋಷ್ಠಿಯಲ್ಲಿ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಗೌಡ ಸಮಾಜದ ಉಪಾಧ್ಯಕ್ಷ ದೊರೆಗಣಪತಿ, ಕಾಶಿ ಪೂವಯ್ಯ,ಕಾರ್ಯದರ್ಶಿ ಹೇಮಂತ್ ಕುಮಾರ್ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!