ಕುಶಾಲನಗರ ಮಾ19: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆ, ಮತ್ತು ಸಂಚಾರಿ ಪೋಲೀಸ್ ಠಾಣೆಗೆ ಭೇಟಿ ನೀಡಿ ಠಾಣಾಧಿಕಾರಿಗಳಿಂದ ಕಾನೂನಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಗ್ರಾಮಾಂತರ ಠಾಣಾಧಿಕಾರಿ ಮೋಹನ್ ರಾಜ್ ನವರು ಸೈನಿಕ ಶಾಲೆಯ ವಿದ್ಯಾರ್ಥಿಗಳಿಗೆ ಪೋಲೀಸ್ ಇಲಾಖೆಗೆ ಸಂಬಂಧಿಸಿದ ಕಾನೂನು, ಮತ್ತು ಕಾನೂನನ್ನು ಪಾಲನೆಯ ಮಾಡುವ ಬಗ್ಗೆ, ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಾನೂನಿನ ನಿಯಮಾನುಸಾರದ ವಿಷಯಗಳನ್ನು ತಿಳದು ನಡೆದರೆ ಉತ್ತಮ ಪ್ರಜೆಗಳಾಗಿ ಬದುಕುವ ಅಂಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು, ಅಲ್ಲದೆ ಸಂಚಾರಿ ನಿಯಮಗಳನ್ನು ಅರಿತುಕೊಂಡ ಅದನ್ವಯ ವಾಹನಗಳ ಚಾಲನೆ ಮಾಡುವುದರ ಬಗ್ಗೆ ಮತ್ತು ಪೋಲೀಸರು ಮತ್ತು ಸಾರ್ವತ್ರಿಕರ ಸ್ನೇಹ ಸಂಬಂಧಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು
ಈ ಸಂದರ್ಭದಲ್ಲಿ ಸೈನಿಕ ಶಾಲೆಯ ಶಿಕ್ಷಕರಾದ. ಜಿ. ಕೆ. ಮಂಜಪ್ಪ, ವೈ. ವಿ. ರಮಣ, ರಾಘವೇಂದ್ರ ರಾಜ್ ಅರಸ್,ಕೆ. ರುಕ್ಮಿಣಿ, ಸೇರಿದಂತೆ ಪೋಲೀಸ್ ಅಧಿಕಾರಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
Back to top button
error: Content is protected !!