ಕಾರ್ಯಕ್ರಮ
ರೈತರ ಕನ್ನಡ ಸಿರಿ ಸಂಕ್ರಾಂತಿ ಸುಗ್ಗಿ ಹಬ್ಬದಲ್ಲಿ ರಾಸುಗಳ ಪ್ರದರ್ಶನ ವೀಕ್ಷಿಸಿದ ಶಾಸಕ ಮಂಥರ್ ಗೌಡ


ಕುಶಾಲನಗರ, ಫೆ 25: ಕುಶಾಲನಗರ ತಾಲೂಕಿನ ತೊರೆನೂರಿನ ಸೂರ್ಯೋದಯ ಪುರುಷರ ಸ್ವಸಹಾಯ ಸಂಘದ 20ನೇ ವಾರ್ಷಿಕೋತ್ಸವ ಅಂಗವಾಗಿ ಗ್ರಾಮದ ಶ್ರೀ ಕಾವೇರಿ ಮಾತಾ ರೈತ ಕೂಟ, ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ದೇವಾಲಯ ಸಮಿತಿ, ಗ್ರಾಮದ ವಿವಿಧ ಸಂಘಸಂಸ್ಥೆಗಳು, ಮಹಿಳಾ ಮತ್ತು ಪುರುಷರ ಸ್ವಸಹಾಯ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ, ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರೈತರ ಕನ್ನಡ ಸಿರಿ ಸಂಕ್ರಾಂತಿ ಸುಗ್ಗಿ ಹಬ್ಬ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಪಾಲ್ಗೊಂಡು ರಾಸುಗಳಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.