ಕುಶಾಲನಗರ, ಜ 30:
ಗುಡ್ಡೆಹೊಸೂರು ಗ್ರಾಪಂನ ಗ್ರಾಮಸಭೆ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆಯಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಕೆಲವು ಇಲಾಖೆ ಅಧಿಕಾರಿಗಳ ಗೈರುಹಾಜರಿ ಬಗ್ಗೆ ನಂಗಾರು ಜಗ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿವೆ. ಆದರೆ ಕಳೆದ 4 ವರ್ಷಗಳಿಂದ ಲೋಕೋಪಯೋಗಿ ಅಭಿಯಂತರರು ಗ್ರಾಮ ಸಭೆಗೆ ಪಾಲ್ಗೊಂಡಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಅಧಿಕಾರಿಗಳ ಅನುಪಸ್ಥಿತಿ ಹಿನ್ನಲೆಯಲ್ಲಿ ಗ್ರಾಮಸ್ಥರು ಕೂಡ ಸಭೆಯಲ್ಲಿ ಪಾಲ್ಗೊಳ್ಳಲು ಮುಂದಾಗುತ್ತಿಲ್ಲ. ಆದ್ದರಿಂದ ಅವರನ್ನು ಸಭೆಗೆ ಕರೆಸಿ ನಂತರ ಸಭೆ ಮುಂದುವರೆಸಲು ಶಶಿಕುಮಾರ್, ಸಂತೋಷ್, ಸಲಿ ಒತ್ತಾಯಿಸಿದರು.
ಎಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗ್ರಾಮಸಭೆ ನಡೆಯಬೇಕಿದೆ. ಈ ಹಿನ್ನಲೆಯಲ್ಲಿ ಇಂದಿನ ಸಭೆ ಮುಂದೂಡುವಂತೆ ಒತ್ತಾಯಿಸಿದರು. ಇಲಾಖೆ ಅಧಿಕಾರಿಗಳ ಬದಲಿಗೆ ಗ್ರಾಪಂ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ಗ್ರಾಪಂ ಆಡಳಿತ ವಹಿಸಿಕೊಂಡಲ್ಲಿ ಮಾತ್ರ ಸಭೆ ಮುಂದುವರೆಸುವಂತೆ ಆಗ್ರಹಿಸಲಾಯಿತು.
ಗುಡ್ಡೆಹೊಸೂರು-ರಸಲ್ ಪುರ ರಸ್ತೆ ಕಾಮಗಾರಿ ಸಂದರ್ಭ ರಸ್ತೆ ಬದಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿಲ್ಲ. ಕಾಮಗಾರಿ ಪೂರ್ಣಗೊಂಡು ಮೂರು ವರ್ಷ ಕಳೆದಿದೆ. ಅಧಿಕಾರಿ ಬದಲಿಗೆ ಸಹಾಯಕರು ಸಭೆಯಲ್ಲಿ ಪಾಲ್ಗೊಂಡಲ್ಲಿ ಅವರಿಂದ ಸಮಸ್ಯೆ ನಿವಾರಣೆ ಸಾಧ್ಯವಿಲ್ಲ. ಆದ್ದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಕಡ್ಡಾಯವಾಗಿ ಸಭೆಗೆ ಕರೆಸುವಂತೆ ಒತ್ತಾಯಿಸಲಾಯಿತು.
ಈ ಹಿನ್ನಲೆಯಲ್ಲಿ ಗ್ರಾಮಸಭೆಯನ್ಬು ಮುಂದೂಡಲಾಯಿತು.
Back to top button
error: Content is protected !!