ಕುಶಾಲನಗರ, ಜ.27: ಕೂಡಿಗೆಯಲ್ಲಿರುವ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ವಾರ್ಷಿಕೋತ್ಸವ, ಮತ್ತು ಅಂಜೆಲಾ ಹಬ್ಬ ವನ್ನು ಶಾಲೆಯ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಬೆಂಗಳೂರು ವಿದ್ಯಾಸಂಸ್ಥೆಯ ಭಗಿನಿ ಬಿಂದು ಎಲ್ಲಿಜಬೆತ್ ನೆರವೇರಿಸಿ ಮಾತಾಡುತ್ತಾ ಸ್ಪರ್ಧಾತ್ಮಕ ಯುಗದ ವಿದ್ಯಾರ್ಥಿಗಳು ಹೆಚ್ಚು ಅಧ್ಯಾಯನ ಶೀಲರಾಗಬೇಕು, ಶಾಲಾ ಹಂತದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ತನ್ನ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತವೆ. ಅದರ ಮೂಲಕ ಉನ್ನತ ಮಟ್ಟದ ವ್ಯಾಸಂಗಕ್ಕೆ ಸಹಕಾರವಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಅಗಮಿಸಿದ ಕೂಡಿಗೆ ಕ್ಲಸ್ಟರ್ ಕೇಂದ್ರ ಸಿ.ಆರ್.ಪಿ. ಶಾಂತಕುಮಾರ ಮಾತನಾಡುತ್ತಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೋಷಕ ಪಾತ್ರ ಬಹು ಮುಖ್ಯವಾಗಿರುತ್ತದೆ. ಮೊಬೈಲ್ ಗೀಳುವಿಕೆಯಿಂದ ದೂರವಿಟ್ಟು ಕಲಿಕೆಗೆ ಪೂರಕವಾಗುವ , ಹೆಚ್ಚು ವಿಷಯಗಳ ಬಗ್ಗೆ ಮನದಟ್ಟು ಮಾಡುವ ಮೂಲಕ ಕ್ರಿಯಾಶೀಲತೆಯನ್ನು ಬೆಳಸಬೇಕಾಗುವುದು ತಮ್ಮೇಲ್ಲರ ಅಧ್ಯ ಕರ್ತವ್ಯವಾಗಿರುತ್ತದೆ. ಎಂದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯನಿ ವೀಣಾ ವಿಜಯ ಕಾಸ್ಟಲಿನೋ ಬೆಂಗಳೂರು ವಿದ್ಯಾಸಂಸ್ಥೆಯ ಶಿಕ್ಷಕಿ ಭಗಿನಿ ರನಿಟ, ನೀಲಪ್ಪ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ ಉಡುಗೆ ತೊಡುಗೆಗಳಿಂದ ರಾಷ್ಟಾಭಿಮಾನದ ನೃತ್ಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Back to top button
error: Content is protected !!