ಕುಶಾಲನಗರ, ಜ 26:
ಚರಂಡಿಗೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆ ನೆಲಸಮ ಮಾಡಿ ನೀರನ್ನು ಕೃಷಿ ಭೂಮಿಗೆ ಹರಿಬಿಟ್ಟಿರುವ ಗ್ರಾಪಂ ವಿರುದ್ದ ಜಮೀನು ಮಾಲೀಕರು ಆಕ್ರೋಷ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕೊಪ್ಪ ಗ್ರಾಪಂ ವ್ಯಾಪ್ತಿಯ ದೊಡ್ಡಹೊಸೂರು ಗ್ರಾಮದ ಉರ್ದು ಶಾಲೆ ಹಿಂಭಾಗದಲ್ಲಿರುವ ಫೈರೋಜ್ ಖಾನ್ ಎಂಬವರಿಗೆ ಸೇರಿದ ಕೃಷಿ ಭೂಮಿಗೆ ಮೇಲಿನಿಂದ ಹರಿದು ಬರುವ ತ್ಯಾಜ್ಯ ತಡೆಗಟ್ಟಲು ತಡೆಗೋಡೆ ನಿರ್ಮಿಸಿದ್ದರು.ಜಮೀನು ಮೇಲ್ಭಾಗದ ಮನೆಗಳಿಂದ ಹರಿದು ಬರುವ ತ್ಯಾಜ್ಯ ನೀರು ಮುಂದೆ ಹರಿಯಲು ಸ್ಥಳವಿಲ್ಲದೆ ಮಡುಗಟ್ಟಿ ನಿಲ್ಲುತ್ತಿರುವ ಕಾರಣ ಚರಂಡಿ ತೆರವುಗೊಳಿಸಲು ಸಲ್ಲಿಸಿದ ಮನವಿ ಮೇರೆಗೆ ಗ್ರಾಪಂ ಪಿಡಿಒ ನೇತೃತ್ವದಲ್ಲಿ ಪೊಲೀಸರ ಸಮ್ಮುಖದಲ್ಲಿ ತಡೆಗೋಡೆ ಒಡೆದು ನೀರು ಹರಿಯಲು ಸ್ಥಳಾವಕಾಸ ಕಲ್ಪಿಸಲಾಯಿತು.
ಈ ಸಂದರ್ಭ ಜಮೀನು ಮಾಲೀಕರ ಸಂಬಂಧಿಗಳಾದ ಅಬ್ಬಾಸ್ ಖಾನ್, ಜೀನದ್ ಬಿ, ಸಲ್ಮಾ ಭಾನು, ನದೀಂ, ಅಂಜದ್ ತೀವ್ರ ಆಕ್ರೋಷ ವ್ಯಕ್ತಪಡಿಸಿ ಪಂಚಾಯ್ತಿ ನಡೆಯ ಬಗ್ಗೆ ಹರಿಹಾಯ್ದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀನು ಮಾಲೀಕ ಫೈರೋಜ್ ಖಾನ್, ಚರಂಡಿ ವಿಚಾರದಲ್ಲಿ ಗ್ರಾಪಂ ಅಧಿಕಾರಿ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಯಾವುದೇ ನೋಟಿಸ್ ನೀಡದೆ ಏಕಾಏಕಿ ಚರಂಡಿಗೆ ನಿರ್ಮಿಸಿದ್ದ ತಡೆಗೋಡೆ ಒಡೆದು ತ್ಯಾಜ್ಯವನ್ನು ನಮ್ಮ ಜಮೀನಿಗೆ ಹರಿಸಿದ್ದಾರೆ. ಪ್ರಕರಣ ಸಂಬಂಧ ನ್ಯಾಯಾಲಯ ಮೆಟ್ಟಿಲೇರಿದ್ದೇವೆ. ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಸೇವಿಸಿ ನಮಗೆ ಸೇರಿದ ಕರು ಸಾಯುವ ಹಂತ ತಲುಪಿದೆ. ಚರಂಡಿ ತ್ಯಾಜ್ಯ ನಮ್ಮ ಜಮೀನಿಗೆ ಹರಿಸಿ ಕೃಷಿ ಬೆಳೆಗೆ ಹಾನಿಯುಂಟು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಗ್ರಾಪಂ ಪಿಡಿಒ ಸತೀಶ್, ತ್ಯಾಜ್ಯ ಮಡುಗಟ್ಟಿ ನಿಂತು, ಸಾಂಕ್ರಾಮಿಕ ರೋಗ ಸ್ಥಳೀಯ ನಿವಾಸಿಗಳನ್ನು ಬಾಧಿಸಿದೆ. ಚರಂಡಿ ನೀರು ಬೇರೆ ದಿಕ್ಕಿಗೆ ಹರಿಸಲು ಗುರುತ್ವಾಕರ್ಷಣೆ ಕೊರತೆ ಹಿನ್ನಲೆ ಇದೇ ಜಮೀನಿಗೆ ಹರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಜಮೀನು ಮಾಲೀಕರಿಗೆ ಈ ಬಗ್ಗೆ ಹಲವು ಬಾರಿ ನೋಟಿಸ್ ನೀಡಿ ಪ್ರಕರಣ ಇತ್ಯರ್ಥಕ್ಕೆ ಪ್ರಯತ್ನಿಸಿದರೂ ಅವರು ಸ್ಪಂದಿಸದ ಹಿನ್ನಲೆಯಲ್ಲಿ ಪಂಚಾಯ್ ರಾಜ್ ಕಾಯ್ದೆ ಸೆಕ್ಷನ್ 75 ಮತ್ತು 99 ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಅಶುಚಿತ್ವದಿಂದ ಸಾಂಕ್ರಾಮಿಕ ರೋಗ ಬಾಧೆ ತಡೆಗಟ್ಟುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ. ಜಮೀನು ಮಾಲೀಕರು ನ್ಯಾಯಾಲಯ ಮೂಲಕ ಆಗಮಿಸಿದಲ್ಲಿ ಅಗತ್ಯ ಪರಿಹಾರ ಕ್ರಮಕ್ಕೆ ಗ್ರಾಪಂ ಮುಂದಾಗಲಿದೆ ಎಂದರು.
ಈ ಸಂದರ್ಭ
Back to top button
error: Content is protected !!