ಟ್ರೆಂಡಿಂಗ್

ಐಪಿಎಂಸಿಎಸ್ ಚುನಾವಣೆ: ಹಾಲಿ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ನೇತೃತ್ವದ ತಂಡ ಗೆಲವು

ಕುಶಾಲನಗರ, ಜ‌  18
ಕುಶಾಲನಗರದ ನಂ.19722ನೇ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಸಾಲಿನ‌ ಅವಧಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ನೇತೃತ್ವದ ತಂಡ ಗೆಲವು ಸಾಧಿಸಿದೆ.

2024-29 ನೇ ಸಾಲಿನ 5 ವರ್ಷಗಳ ಅವಧಿಗೆ 15 ಮಂದಿ ಆಡಳಿಯ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಗುರುವಾರ ಮತದಾನ ನಡೆಯಿತು. 15 ಸ್ಥಾನಕ್ಕೆ ಒಟ್ಟು 21 ಮಂದಿ ನಾಮಪತ್ರ ಸಲ್ಲಿಸಿದ್ದರು.

ಹಾಲಿ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಸೇರಿದಂತೆ ಅವರ ನೇತೃತ್ವದ ತಂಡದ ಅಭ್ಯರ್ಥಿಗಳಾದ ಜೋಸೆಫ್ ವಿಕ್ಟರ್ ಸೋನ್ಸ್, ಎಂ.ವಿ.ನಾರಾಯಣ್, ಎನ್.ಇ.ಶಿವಪ್ರಕಾಶ್, ನವೀನ್ ಎಲ್, ಶರತ್ ಕೆ.ಪಿ, ಸುರೇಶ್ ಕುಮಾರ್ ಕೆ, ಕೆ.ಎನ್.ಸುರೇಶ್, ನವೀನ್ ಜಿ.ಡಿ, ಕವಿತಾ ಪಿ.ಎಂ, ಕೃತಿಕ ಪೊನ್ನಪ್ಪ, ಶಾಹಿರ್ ಎಂ.ಎಂ, ರಾಮಕೃಷ್ಣಯ್ಯ ಬಿ, ಕೀರ್ತಿಲಕ್ಷ್ಮಿ ಆರ್.ಜಿ ಚುನಾವಣೆಯಲ್ಲಿ ಆಯ್ಕೆಯಾದರು.

ಈ ಪೈಕಿ ಅಮೃತ್ ವಿ.ಸಿ ಅವಿರೋಧವಾಗಿ ಅಯ್ಕೆಯಾಗಿದ್ದರು. ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘದ ಸಹಾಯಕ‌ ನಿಬಂಧಕರ ಕಛೇರಿಯ ದ್ವಿತೀಯ ದರ್ಜೆ ಸಹಾಯಕ ಸಂದೀಪ್, ಇಲಾಖೆ ಸಿಬ್ಬಂದಿಗಳು ಕಾರ್ಯನಿರ್ವಹಿಸಿದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!