ಕುಶಾಲನಗರ, ಮಾ 31: ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಏಪ್ರಿಲ್ 27 ರಿಂದ ಮೂರು ದಿನ ಕುಶಾಲನಗರದಲ್ಲಿ ಸಹಾರ ಕಪ್ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಸಜಿ ಭರತ್ ತಿಳಿಸಿದರು.
ಕುಶಾಲನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡದ ಅವರು, ಗುಂಡುರಾವ್ ಬಡಾವಣೆಯಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಆಟಗಾರರು, ಪ್ರೇಕ್ಷಕರಿಗೆ ಊಟದ ವ್ಯವಸ್ಥೆ ಕೂಡ ಏರ್ಪಡಿಸಲಾಗಿದೆ.
ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಿದೆ ಎಂದರು.
ಕ್ಲಬ್ ಮಾಜಿ ಅಧ್ಯಕ್ಷ ಹೆಚ್.ಕೆ.ಸುಮೇರ್ ಮಾತನಾಡಿ, ಕಳೆದೆರೆಡು ವರ್ಷ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿದೆ. ಈ ಬಾರಿ ಕೂಡ ಬೀಟೆ ಮರದಿಂದ ನಿರ್ಮಿಸಿದ ಆಕರ್ಷಕ ಟ್ರೋಫಿ ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕ್ಲಬ್ ಪದಾಧಿಕಾರಿ ರಕ್ಷಿತ್ ಮಾವಜಿ ಮಾತನಾಡಿ, ಈಗಾಗಲೆ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕೊಡಗಿನ 10 ತಂಡ ಗಳು ಕ್ರೀಡಾಕೂಟದಲ್ಲಿ ಭಾಗಿಯಾಗಲಿವೆ. ಆಕರ್ಷಕ ನಗದು ಹಾಗೂ ಟ್ರೋಪಿಗಳು ಬಹುಮಾನವಾಗಿ ನೀಡಲಾಗುವುದು. ವಿಶೇಷವಾಗಿ ಪ್ರತಿ ತಂಡಗಳಲ್ಲಿ ಮೂವರು ಐಕಾನ್ ಆಟಗಾರರು ಪ್ರತಿನಿಧಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಕ್ಲಬ್ ಪದಾಧಿಕಾರಿಗಳಾದ ಬಿಲಾಲ್, ಸಲ್ಮಾನ್, ಯೂನಸ್, ಪ್ರಶಾಂತ್, ಆಶಿಕ್, ಸುಜಯ್ ಮತ್ತಿತರರು ಇದ್ದರು.
Back to top button
error: Content is protected !!