ಕುಶಾಲನಗರ ಜ 18:ಈ ಹಿಂದೆ ಮುಳ್ಳುಸೋಗೆ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿದ್ದ ಗೊಂದಿ ಬಸವನಹಳ್ಳಿ ಗ್ರಾಮವು ಇತ್ತೀಚಿಗೆ ಕುಶಾಲನಗರ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು ಈ ಭಾಗದ ಗ್ರಾಮಸ್ಥರಿಗೆ ಕುಡಿಯುವ ಹಾಗೂ ದೈನಂದಿನ ಬಳಕೆಗೆ ಬೇಕಾದ ನೀರಿಗೆ ಭಾರಿ ತೊಂದರೆಗಳು ದಿನೇ ದಿನೇ ಹೆಚ್ಚುತಿದ್ದದ್ದು ಗಮನಿಸಿದ ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ಉದಯ ಕುಮಾರ್, ಪುರಸಭೆ ಅಭಿಯಂತರರಾದ ರಂಗರಾಮ್ ಹಾಗೂ ತಂಡದವರು ಮತ್ತು ಪುರಸಭೆ ಸದಸ್ಯರಾದ ಎಂ.ಕೆ ಸುಂದರೇಶ್ ( ವಾರ್ಡ್ ನಂ. 15 ) ಅವರು ನೀರಿಗೆ ತೊಂದರೆ ಆಗದಂತೆ ಶಾಶ್ವತ ಪರಿಹಾರ ನೀಡುವ ಸಲುವಾಗಿ *ಹೆಚ್ಚುವಾರಿಯಾಗಿ ಕೊಳವೆ ಬಾವಿ ( ಬೋರ್ವೆಲ್ ) ಗೆ ಮೋಟಾರ್ ಪಂಪ್ ಅನ್ನು ಅಳವಡಿಸಿ ಗ್ರಾಮಸ್ಥರಿಗೆ ಕುಡಿಯುವ ಹಾಗೂ ದೈನಂದಿನ ಬಳಕೆಗೆ ಬೇಕಾದ ನೀರನ್ನು ಸರಬರಾಜು ಮಾಡಲು ಕ್ರಮವಹಿಸಲಾಗಿದೆ.*
Back to top button
error: Content is protected !!