ಟ್ರೆಂಡಿಂಗ್

ಹಿಟ್ ಅಂಡ್ ರನ್: ನೂತನ ಕಾನೂನು ವಿರೋಧಿಸಿ ಕುಶಾಲನಗರದಲ್ಲಿ ಪ್ರತಿಭಟನೆ

ಕುಶಾಲನಗರ, ಜ 18: ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿಸಿರುವ ಕಠಿಣ ಕಾನೂನು ವಿರೋಧಿಸಿ ಹಮ್ಮಿಕೊಂಡಿರುವ ಮುಷ್ಕರ ಕ್ಕೆ ಕುಶಾಲನಗರ ತಾಲೂಕಿನಾದ್ಯಂತ ಬೆಂಬಲ ವ್ಯಕ್ತಗೊಂಡಿದೆ.

ಕುಶಾಲನಗರದ ಕಾವೇರಿ ಲಾರಿ ಮಾಲೀಕರು ಮತ್ತು ಚಾಲಕರು ಸಂಘದಿಂದ ಪ್ರತಿಭಟನೆ ನಡೆಯಿತು.
ಕುಶಾಲನಗರದ ಗುಂಡುರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ನೂರಾರು ವಾಹನಗಳನ್ನು ನಿಲ್ಲಿಸಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು. ಹೊಸ ಕಾನೂನು ರದ್ದತಿಗೆ ಆಗ್ರಹಿಸಿ ಚಾಲಕರು, ಮಾಲೀಕರು ಘೋಷಣೆಗಳನ್ನು ಮೊಳಗಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಗೌರವಾಧ್ಯಕ್ಷ ಬಾಲು ರಾಮದಾಸ್, ಹಿಟ್ ಅಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ 10 ವರ್ಷ ಜೈಲು, 7 ಲಕ್ಷ ದಂಡ ವಿಧಿಸುವ ಕಾನೂನು ವಿರೋಧಿಸಿ ರಾಜಾದ್ಯಂತ ಹಮ್ಮಿಕೊಂಡಿರುವ ಮುಷ್ಕರ ಬೆಂಬಲಿಸಿ ನಾವು ಪ್ರತಿಭಟನೆ ಕೈಗೊಂಡಿದ್ದೇವೆ. ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ಹೊರತುಡಿಸಿ ಇತರೆ ಚಾಲಕರು ನಮ್ಮ ಹೋರಾಟಕ್ಕೆ‌ ಸಹಕಾರ ನೀಡಬೇಕು. ನಾವು ಕೂಡ ಬರುವ ಆದಾಯ ತ್ಯಜಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದು ನಮ್ಮ ಬೇಡಿಕೆ ಈಡೇರುವವರೆಗೆ ಮುಷ್ಕರ ಮುಂದುವರೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಪ್ರವೀಣ್ ಕುಮಾರ್, ಖಜಾಂಚಿ ದಿನೇಶ್, ಪ್ರಮುಖರಾದ ಮಹೇಶ್, ದೊಡ್ಡಣ್ಣ, ಜಯಣ್ಣ, ರಾಜಣ್ಣ, ಬಸವರಾಜು ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!