ಪ್ರಯಾಣಿಕನ ಚಿನ್ನದ ಸರ ಕಸಿದ ಆಟೋ ಚಾಲಕನ ಬಂಧನ
ಕುಶಾಲನಗರ, ಜ 08: ಮಡಿಕೇರಿ ನಗರ ದೇಚೂರು ನಿವಾಸಿಯಾದ ಶ್ರೀ ಶಿವಕುಮಾರ್ ಎಂಬುವವರು ದಿನಾಂಕ: 07-01-2024 ರಾತ್ರಿ ಸುಮಾರು 09 ಘಂಟೆ ಸಮಯದಲ್ಲಿ ಅಪ್ಪಚ್ಚು ಕವಿ ರಸ್ತೆಯ ಬಳಿ ಆಟೋ ರಿಕ್ಷಾದಲ್ಲಿ ಮನೆಗೆ ತೆರಳುವಾಗ, ಸದರಿ ಆಟೋ ಚಾಲಕನು ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಶಿವಕುಮಾರ್ ರವರನ್ನು ಕೆಳಗೆ ಎಳೆದು ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ 15 ಗ್ರಾಂ ಚಿನ್ನದ ಸರವನ್ನು ಬಲಾತ್ಕಾರವಾಗಿ ಕಸಿದು ಪರಾರಿಯಾಗಿರುವ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿದ್ದು, ಘಟನಾ ಸ್ಥಳಕ್ಕೆ ಶ್ರೀ ಕೆ.ರಾಮರಾಜನ್, ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಶ್ರೀ.ಅನೂಪ್ ಮಾದಪ್ಪ, ಸಿಪಿಐ, ಮಡಿಕೇರಿ ನಗರ ವೃತ್ತ, ಶ್ರೀ ಲೋಕೇಶ, ಪಿಎಸ್‌ಐ ಮತು ಶ್ರೀಮತಿ ರಾಧ, ಪಿಎಸ್‌ಐ ಹಾಗೂ ಸಿಬ್ಬಂದಿಗಳು ಮಡಿಕೇರಿ ನಗರ ಪೊಲೀಸ್ ಠಾಣೆ ರವರು ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆಯಲಾಗಿರುತ್ತದೆ,
ಸದರಿ ಪ್ರಕರಣದ ಆರೋಪಿ ಪತ್ತೆಗಾಗಿ ಶ್ರೀ.ಅನೂಪ್ ಮಾದಪ್ಪ, ಸಿಪಿಐ, ಮಡಿಕೇರಿ ನಗರ ವೃತ್ತ, ಶ್ರೀ.ಲೋಕೇಶ್, ಪಿಎಸ್‌ಐ, ಶ್ರೀಮತಿ ರಾಧಾ, ಪಿಎಸ್‌ಐ, ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳೊಂದಿಗೆ ಉಪ ವಿಭಾಗ ಮಟ್ಟದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ದಿನಾಂಕ: 07-01-2024 ರಂದು ಮಡಿಕೇರಿ ರಾಜರಾಜೇಶ್ವರಿ ನಗರ ನಿವಾಸಿಯಾದ ಅಬ್ದುಲ್ ರಜಾಕ್, 35 ವರ್ಷ ಎಂಬುವವನನ್ನು ದಸ್ತಗಿರಿ ಮಾಡಲಾಗಿದ್ದು, 15 ಗ್ರಾಂ ಚಿನ್ನದ ಸರ ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸದರಿ ಘಟನೆ ನಡೆದ 02 ಗಂಟೆಯೊಳಗೆ ಪ್ರಕರಣದ ಆರೋಪಿಯನ್ನು ದಸ್ತಗಿರಿ ಮಾಡಿ, ಸಂಪೂರ್ಣ ವಿಚಾರಣೆಯನ್ನು ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಶ್ರೀ. ಕೆ. ರಾಮರಾಜನ್, ಐ.ಪಿ.ಎಸ್, ಪೊಲೀಸ್
ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.
ವಿಶೇಷ ಸೂಚನೆ:- ಆಟೋ ರಿಕ್ಷಾ ಅಥವಾ ಟ್ಯಾಕ್ಸಿಗಳಲ್ಲಿ ಬಾಡಿಗೆ ತೆರಳುವ ಸಂದರ್ಭ ಚಾಲಕರು
ಯಾವುದೇ ರೀತಿಯಲ್ಲಿ ಅನುಚಿತವಾಗಿ ವರ್ತಿಸುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತೇವೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.