ಟ್ರೆಂಡಿಂಗ್

ಹಾರಂಗಿ ಜಲಾಶಯದಲ್ಲಿನ ಕಾವೇರಿ‌ ಮಾತೆಗೆ ಪೂಜೆ ಸಲ್ಲಿಸಿದ ಶಾಸಕ ಡಾ.ಮಂಥರ್ ಗೌಡ

ಕುಶಾಲನಗರ, ಅ 21: ಹಾರಂಗಿ ಅಣೆಕಟ್ಟೆ ಆವರಣದೊಳಗಿರುವ ಕಾವೇರಿ ಮಾತೆ ಪ್ರತಿಮೆಗೆ ಶಾಸಕ ಡಾ.ಮಂಥರ್ ಗೌಡ ಪೂಜೆ ಸಲ್ಲಿಸಿದರು.

ತಲಕಾವೇರಿಯಿಂದ ಸಂಗ್ರಹಿಸಿ ತಂದ ಕಾವೇರಿ ತೀರ್ಥವನ್ನು ಪೂಜೆ ಸಲ್ಲಿಸಿ ನೆರೆದಿದ್ದ ಭಕ್ತರಿಗೆ ವಿತರಣೆ‌ ಮಾಡಲಾಯಿತು.

ಈ ಸಂದರ್ಭ ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ನೀರು ಬಳಕೆದಾರರ ಸಂಘದ ಮುಖಂಡ ಚೌಡೇಗೌಡ, ಕಾರ್ಯಪಾಲಕ ಅಭಿಯಂತರ ದೇವೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಸೇರಿದಂತೆ ನೀರಾವರಿ‌ ನಿಗಮದ ಅಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!