ಪ್ರಕಟಣೆ

ಕೂಡುಮಂಗಳೂರು ಇಂಡಸ್ಟ್ರಿಯಲ್ ಏರಿಯಾದ ಜಂಕ್ಷನ್ ಪರಿಶೀಲನೆ

ಕುಶಾಲನಗರ, ಅ 21: ಕೂಡುಮಂಗಳೂರು ಇಂಡಸ್ಟ್ರಿಯಲ್ ಏರಿಯಾದ ಜಂಕ್ಷನ್ ಬಳಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದರು

ಈ ಸಂದರ್ಭ ಸಂಚಾರಿ ಠಾಣಾ ಅಧಿಕಾರಿ ಕಾಶಿನಾಥ್ ರವರು ಪದೇಪದೇ ಅಪಘಾತವಾಗಲು ಪ್ರಮುಖ ಕಾರಣಗಳ ಬಗ್ಗೆ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ
ಭಾಸ್ಕರ್ ನಾಯಕ್,
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯಾದ ಜಂಕ್ಷನ್ ಬಳಿ 4 ಪ್ರಮುಖ ರಸ್ತೆಗಳು ಸೇರುವ ಜಂಕ್ಷನ್ ಇದ್ದು ಇಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಪದೇಪದೇ ಅಪಘಾತಗಳು ಸಂಭವಿಸುತ್ತಿರುತ್ತದೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುರಿಂದ ಕೂಡುಮಂಗಳೂರು ಇಂಡಸ್ಟ್ರಿಯಲ್ ಏರಿಯಾ ಜಂಕ್ಷನ್ ಬಳಿ ನಾಲ್ಕು ಕಡೆ ರಸ್ತೆ ಕಾಣುವಂತೆ ಪ್ರಕಾಶಮಾನವಾದ (ಸೋಡಿಯಂ) ದೀಪಗಳನ್ನು ಅಳವಡಿಸುವ ಮುಖಾಂತರ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯದ ಸಂತೋಷ್ ರವರು ಪಂಚಾಯತಿ ನೌಕರರ ಅವಿನಾಶ್  ಸಂಚಾರಿ ಠಾಣಾ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!