ಕುಶಾಲನಗರ, ಅ 20: ರಾಮನಗರ ಜಿಲ್ಲೆ ಕನಕಪುರದಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಶಾಲೆ ವಿಭಾಗದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರದ ಉದ್ಗಂ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವಿಶಾಲ್ ಡಿ. ಆನಂದ್ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತಾರೆ. ಇವರು ಕುಶಾಲನಗರದ ಯುವ ಉದ್ಯಮಿ ಆನಂದ್ ಹಾಗು ಭವ್ಯ ಅವರ ಪುತ್ರ.