ಕುಶಾಲನಗರ, ಆ 05: ಭರವಸೆಯಂತೆ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ದಾನಿಗಳು
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಬಡ ವಿಧವಾ ಮಹಿಳೆಗೆ ದಾನಿಗಳು ಮನೆಯೊಂದನ್ನು ನಿರ್ಮಿಸಿಕೊಟ್ಟು ಉದಾರತೆ ಮೆರೆದಿದ್ದಾರೆ.
ಗ್ರಾಪಂ ಅದ್ಯಕ್ಷ ಸಿ.ಎಲ್.ವಿಶ್ವ ನೇತೃತ್ವದ ತಂಡದಿಂದ ನಿರ್ಮಿಸಿದ ಮನೆಯನ್ನು ಬಡ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.
ಕಳೆದ ಎರಡೂವರೆ ವರ್ಷದ ಹಿಂದೆ ನಂಜರಾಯಪಟ್ಟಣ
ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಮತಯಾಚನೆ ಮಾಡುವ ಸಂದರ್ಭ
ಗ್ರಾಮದ ಗುಳಿಗ ಪೈಸಾರಿಯಲ್ಲಿ ಬೀಳುವ ಹಂತದಲ್ಲಿದ್ದ ಮನೆಯನ್ನು ಗಮನಿಸಿದ ಸಿ.ಎಲ್.ವಿಶ್ವ ತಾನು ಚುನಾವಣೆಯಲ್ಲಿ ಗೆದ್ದರೂ, ಸೋತರು ಸಹ ಮನೆಯೊಂದನ್ನು ನಿರ್ಮಿಸಿಕೊಡುತ್ತೇನೆಂದು ನತಾಲಿಯ ಅವರಿಗೆ ಭರವಸೆ ನೀಡಿದ್ದರು.
ಮನೆ ನಿರ್ಮಿಸಿಕೊಡುವ ಭರವಸೆಯಂತೆ ನಡೆದುಕೊಂಡ ಸಿ.ಎಲ್.ವಿಶ್ವ ಅವರು ಕಳೆದ ಎರಡು ವರ್ಷ ಅವಧಿಯಲ್ಲಿ ಹೊಸ ಮನೆ ನಿರ್ಮಾಣಕ್ಕೆ ಮುಂದಾದರು.
ಜೆಡಿಎಸ್ ಸಾಮಾಜಿಕ ಜಾಲತಾಣದ ರಾಜ್ಯ ಪ್ರಮುಖ ಚಂದನ್, ರಾಜ್ಯ ಮುಖಂಡ ರಕ್ಷಿತ್, ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಎಚ್.ಎಸ್.ಚೇತನ್ ಅವರ ಸಹಕಾರದೊಂದಿಗೆ ರೂ 3 ಲಕ್ಷ ವೆಚ್ಚದಲ್ಲಿ ಎರಡು ಬೆಡ್ ರೂಂ, ಹಾಲ್ ಒಳಗೊಂಡ ಶೀಟ್ ಮನೆಯನ್ನು ನಿರ್ಮಿಸಲಾಗಿದೆ.
ನಿರ್ಮಿಸಿದ ಮನೆಗೆ ಮಾಜಿ ಮುಖ್ಯಮಂತ್ರಿಯಾದ ಎಚ್.ಡಿ. ಕುಮಾರಸ್ವಾಮಿ ಕೃಪ ನಿಲಯ ಎಂದು ನಾಮಕರಣ ಮಾಡಿ ಗ್ರಾಮದ ವಿಧವಾ ಮಹಿಳೆ ನತಾಲಿಯ ಅವರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಫಲಾನುಭವಿ ನತಾಲಿಯ, ಗಂಡನಿಲ್ಲದ ತಾನು ನಾಲ್ಕು ಮಕ್ಕಳನ್ನು ಕೂಲಿ ಮಾಡಿ ಸಾಕುತ್ತಿದ್ದು, ಯಾವುದೇ ಸಂದರ್ಭ ಕುಸಿಯಬಹುದಾದ ಸ್ಥಿತಿಯಲ್ಲಿರುವ ಮನೆಯಲ್ಲಿ ವಾಸವಿದ್ದೆ. ದಾನಿಗಳ ನೆರವಿನಿಂದ ಹೊಸ ಮನೆ ದೊರೆತಿರುವುದು ನಮಗೆ ಆಸರೆಯಾಗಿದೆ ಎಂದು ಕೃತಜ್ಞತೆ ಸಮರ್ಪಿಸಿದರು.
ಇದೇ ಸಂದರ್ಭ ಮನೆ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನೂತನ ಮನೆ ಒದಗಿಸಿಕೊಟ್ಟ ಸಿ.ಎಲ್.ವಿಶ್ವ ಮತ್ತು ತಂಡಕ್ಕೆ ಫಲಾನುಭವಿ ಮಹಿಳೆ ಧನ್ಯವಾದ ಸಲ್ಲಿಸಿದರು.
Back to top button
error: Content is protected !!