ಕುಶಾಲನಗರ, ಆ 05: ಮೋದಿ ಸರ್ ನೇಮ್ ವಿಚಾರವಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಸಂಭ್ರಮಾಚರಣೆ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಪಕ್ಷದ ಜನಪ್ರತಿನಿದಿಗಳು,ಮುಖಂಡರು ಹಾಗೂ ಕಾರ್ಯಕರ್ತರು ರಾಹುಲ್ ಗಾಂಧಿ ಭಾವಚಿತ್ರ ಮತ್ತು ಪಕ್ಷದ ಬಾವುಟ ಹಿಡಿದು ಕಾಂಗ್ರೆಸ್ ಕಛೇರಿಯಿಂದ ಹೊರಟು ಪಟ್ಟಣದ ಮುಖ್ಯ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಬ್ಯಾಂಡ್ ಸೆಟ್ ಸಮ್ಮುಖದಲ್ಲಿ ಮೆರವಣಿಗೆ ನಡೆಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ
ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಪಿ. ಶಶಿಧರ್, ರಾಹುಲ್ ಗಾಂಧಿ ಪ್ರಕರಣದಲ್ಲಿ ನ್ಯಾಯಕ್ಕೆ ಜಯಸಿಕ್ಕಿದೆ. ಇದು ಸತ್ಯ ಮತ್ತು ಪ್ರೀತಿಗೆ ಸಂದ ಜಯ ಹಾಗೂ ಸುಳ್ಳು ಮತ್ತು ದ್ವೇಷಕ್ಕೆ ಆದ ಸೋಲು. ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಈ ಆದೇಶದಿಂದ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ದುರ್ಬಲರ ಪರವಾದ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು. ದೇಶವನ್ನು ಏಕಪಕ್ಷೀಯ ಆಡಳಿತಕ್ಕೆ ಒಳಪಡಿಸುವ ಮೋದಿ, ಶಾ ದುಷ್ಟಕೂಟದ ಪಿತೂರಿಗೆ ನ್ಯಾಯಾಂಗ ಪೆಟ್ಟು ನೀಡಿದೆ ಎಂದು ವ್ಯಂಗ್ಯಿಸಿದರು.
ಈ ಸಂದರ್ಭ ಕೆ.ಪಿ.ಸಿ.ಸಿ ಸದಸ್ಯ ಮಂಜುನಾಥ್ ಗುಂಡೂರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಎಂ. ಲತೀಫ್, ಪುರಸಭೆ ಸದಸ್ಯರಾದ ಶೇಕ್ ಖಲೀಮುಲ್ಲ, ದಿನೇಶ್, ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಕುಮಾರ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಶಿವಶಂಕರ್, ಪಕ್ಷದ ಸಾಮಾಜಿಕ ಜಾಲಾತಾಣದ ಪ್ರಮುಖರಾದ ಅಬ್ದುಲ್ ರಜಾಕ್, ಮುಖಂಡರಾದ ನಟೇಶ್ ಗೌಡ, ಜೋಸೆಫ್ ವಿಕ್ಟರ್ ಸೋನ್ಸ್, ಕೆ.ಎನ್ ಅಶೋಕ್, ಶಾಜಿ, ಆದಮ್, ಜಗದೀಶ್, ಹರೀಶ್, ರಾಜಶೇಖರ್, ಚಂದನ್, ಭೀಮಯ್ಯ, ಮುಸ್ತಫ, ನವೀನ್ ಹಾಗೂ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
Back to top button
error: Content is protected !!