ಕುಶಾಲನಗರ, ಏ 27:
ಕುಶಾಲನಗರದ ಅತ್ತೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮೂಲತಃ ಮಡಿಕೇರಿ ತಾಲೂಕು ಮುಟ್ಲು ಗ್ರಾಮದವರಾದ ಪ್ರಸ್ತುತ ಸೋಮವಾರಪೇಟೆಯಲ್ಲಿ ವಾಸವಾಗಿದ್ದ ರೈತ ರಾಜು ಮಾಚಯ್ಯ (63) ಮೃತ ದುರ್ದೈವಿ. ಬುಧವಾರ ಸಂಜೆ
ಕುಶಾಲನಗರದಲ್ಲಿ ತಿಥಿ ಕಾರ್ಯವೊಂದನ್ನು ಮುಗಿಸಿಕೊಂಡು ಸೋಮವಾರಪೇಟೆಗೆ ಆಕ್ಟೀವ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭ ಅತ್ತೂರು ಬಳಿ ತುಂತುರು ಮಳೆಯ ಕಾರಣ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ನೆಲ್ಲಕ್ಕುರುಳಿದ ಸಂದರ್ಭ ರಾಜು ಅವರ ತಲೆ ಕಲ್ಲಿಗೆ ಬಡಿದಿದೆ. ಕೂಡಲೆ ಕುಶಾಲನಗರ ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ. ಮೃತರು ಪತ್ನಿ, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮೊನ್ನೆ ತಾನೇ ಸೋಮವಾರ ಇವರ ಮಗನ ಮದುವೆ ಸಮಾರಂಭ ನಡೆದಿತ್ತು.
Back to top button
error: Content is protected !!