ಕುಶಾಲನಗರ, ಏ 27: ಜೆಡಿಎಸ್ ಪಕ್ಷದ ಮಡಿಕೇರಿ ಕ್ಷೇತ್ರ ಅಭ್ಯರ್ಥಿ ನಾಪಂಡ ಮುತ್ತಪ್ಪ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬೃಹತ್ ಬೈಕ್ ಜಾಥಾ ನಡೆಸಿ ಮತಯಾಚನೆ ಮಾಡಿದರು.
ಕೊಡಗು-ಹಾಸನ ಗಡಿ ಶಿರಂಗಾಲದಿಂದ ಕುಶಾಲನಗರ ತನಕ. ನೂರಾರು ದ್ವಿಚಕ್ರ ವಾಹನಗಳಲ್ಲಿ ಸಾವಿರಾರು ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ನಾಪಂಡಮುತ್ತಪ್ಪ, ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು.
ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದಲ್ಲಿ ತೆರಿಗೆ ಹಣ ಸ್ಥಳೀಯವಾಗಿಯೇ ಬಳಸಿಕೊಂಡು ಹೆಚ್ಚಿನ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಿದೆ. ಬಡವರ, ರೈತಪರ ಯೋಜನೆಗಳನ್ನು ಜಾರಿಗೊಳಿಸಿ ಈಗಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ಚತ ಪರಿಹಾರ ಕಂಡುಕೊಳ್ಳಲು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕಿದೆ ಎಂದು ಕರೆ ನೀಡಿದರು.
ಶಿರಂಗಾಲದಲ್ಲಿ ರೋಡ್ ಶೋ ಗೆ ಚಾಲನೆ ನೀಡಿದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ, ಕೂಡುಮಂಗಳೂರು ರಾಮೇಶ್ಚರ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮಾತನಾಡಿ, ಕಳೆದ 25 ವರ್ಷಗಳಿಂದ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ನಾಪಂಡಮುತ್ತಪ್ಪ ಅವರ ಗೆಲುವಿಗೆ ಮತದಾರರು ಚಿಂತನೆ ಹರಿಸಿ ಮತ ನೀಡುವಂತೆ ಕೋರಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್, ಯುವ ಘಟಕ ಅಧ್ಯಕ್ಷ ಸಿ.ಎಲ್.ವಿಶ್ಚ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಇಸಾಖ್ ಖಾನ್, ತಾಲೂಕು ಅಧ್ಯಕ್ಷ ಪಿ.ಡಿ.ರವಿ, ಪ್ರಮುಖರಾದ ನಾಪಂಡಮುದ್ದಪ್ಪ, ಮೂರ್ತಿ, ಎಚ್.ಎಂ.ಚಂದ್ರು, ಎಚ್.ಡಿ.ಚಂದ್ರು, ಎಚ್.ಟಿ.ವಸಂತ, ರಿಜ್ವಾನ್, ವಿನಯ್, ರಾಮಚಂದ್ರ ಮತ್ತಿತರರು ಇದ್ದರು.
Back to top button
error: Content is protected !!