ಕ್ರೀಡೆ

ಕ್ರೀಡಾಶಾಲೆ, ವಸತಿ‌ನಿಲಯ ಪ್ರವೇಶಾತಿಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭ

ಕುಶಾಲನಗರ, ಏ 18: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023-24 ನೇ ಸಾಲಿಗೆ ಕ್ರೀಡಾ ವಸತಿ ಶಾಲೆ, ವಸತಿ ನಿಲಯ ಗಳಿಗೆ ಪ್ರವೇಶ ನೀಡುವ ಕುರಿತು ಕಿರಿಯರ ವಿಭಾಗದಲ್ಲಿ ಕ್ರೀಡಾ ಪಟುಗಳ ಆಯ್ಕೆಯ ಅಂತಿಮ ಪರಿಶೀಲನಾ ಪ್ರಕ್ರಿಯೆಗೆ ಚಾಲನೆ‌ ನೀಡಲಾಯಿತು‌.
ವಿವಿಧ ಹಂತಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲಾ ಆವರಣದಲ್ಲಿ ಮುಂದಿನ 7 ದಿನಗಳ ಕಾಲ ಆಯ್ಕೆ ಪ್ರಕ್ರಿಯೆ ಮತ್ತು ತರಬೇತಿ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕ್ರೀಡಾ ಪ್ರೌಢಶಾಲಾ ಮುಖ್ಯೋಪಾಧ್ಯಾಯ ದೇವಕುಮಾರ್ ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ, ಸೂಚನೆಗಳನ್ನು ವಿವರಿಸಿದರು.
ಕಿರಿಯರ ವಿಭಾಗದ ಹಾಕಿ ಕ್ರೀಡೆಯಲ್ಲಿ ಒಟ್ಟು 52 ವಿದ್ಯಾರ್ಥಿಗಳಿದ್ದು 22 ಬಾಲಕಿಯರು, 30 ಬಾಲಕರು, ಪುಟ್ ಬಾಲ್ ವಿಭಾಗದಲ್ಲಿ 25 ವಿದ್ಯಾರ್ಥಿಗಳು, ಜಿಮ್ನಾಸ್ಟಿಕ್ಸ್ ನಲ್ಲಿ ಓರ್ವ ಬಾಲಕಿ, ಇಬ್ಬರು ಬಾಲಕರು ಭಾಗವಹಿಸಿ ಅಂತಿಮ ಆಯ್ಕೆ ಪ್ರಕ್ರಿಯೆಗೆ ನೊಂದಣಿಯಾಗಿದೆ.
‌ ನೋಂದಣಿಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಇಲಾಖೆಯ ವತಿಯಿಂದ ವಸತಿ ಸೌಲಭ್ಯ ಮತ್ತು ಅಹಾರದ ವ್ಯವಸ್ಥೆಗಳನ್ನು ಒದಗಿಸಲಾಗಿದೆ ಎಂದು ನಿಯೋಜಿತ ಅಧಿಕಾರಿ ದೇವಕುಮಾರ್, ಶಿಬಿರಾಧಿಕಾರಿಯಾದ ಬಿ.ಎಸ್‌ ವೆಂಕಟೇಶ್ ಮಾಹಿತಿ ನೀಡಿದರು.
ಏ. 18 ರಿಂದ 24 ರವರೆಗೆ ವಿದ್ಯಾರ್ಥಿಗಳಿಗೆ ಆಯಾ ಕ್ರೀಡೆಗಳಿಗೆ ಅನುಕೂಲವಾಗುವಂತೆ ಶಿಬಿರದಲ್ಲಿ ಆಯಾ ವಿಭಾಗದ ತರಬೇತುದಾರರು ತರಬೇತಿ ನೀಡಲಿದ್ದಾರೆ.
ಹಾಕಿ ವಿಭಾಗದಿಂದ ಬಿ.ಎಸ್. ವೆಂಕಟೇಶ್, ಸಂಚಾಲಕ ದಿನಮಣಿ, ಬಿಂದಿಯಾ, ಸುಂದರೇಶ್ ,ವಿಜಯ ಕೃಷ್ಣ, ರವೀಶ್ ತರಬೇತಿ‌ ನೀಡುತ್ತಿದ್ದು,
ಪುಟ್ಬಾಲ್ ವಿಭಾಗದಲ್ಲಿ ಚಾಮರಾಜನಗರ ಜಿಲ್ಲೆಯ ಬಿ.ಕೆ. ಗೋಪಾಲ್, ಮಂಡ್ಯದ ಬಾಬು ಗುರುರಾಜ್, ಹಾಸನದ ಕೃಷ್ಣ, ಬೆಂಗಳೂರಿನ ಮಹಮ್ಮದ್ ಮಸೂದ್, ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ತರಬೇತಿದಾರ ಸುರೇಶ್, ಮೈಸೂರು ಲೋಕೇಶ್, ತುಮಕೂರು ಸುಧೀರ್, ದೇವದಾಸ್ ನವರು ಭಾಗವಹಿಸಿ ಶಿಬಿರದ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅಂತಿಮ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿದ್ದಾರೆ ಎಂದು ಶಿಬಿರದ ಸಂಚಾಲಕ ಬಿ.ಎಸ್. ವೆಂಕಟೇಶ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!