ಟ್ರೆಂಡಿಂಗ್

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ

ಕುಶಾಲನಗರ, ಅ 22: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು( ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್,ಎನ್.ಎಸ್.ಎಸ್.ಘಟಕ ಎಸ್.ಡಿ.ಎಂ.ಸಿ.ಯ
ವತಿಯಿಂದ ಶನಿವಾರ ಏರ್ಪಡಿಸಿದ್ದ
ಪರಿಸರ ಸ್ನೇಹಿ ದೀಪಾವಳಿ ಆಚರಣೆ’ ಜಾಗೃತಿ ಆಂದೋಲನ ನಡೆಸಲಾಯಿತು.
ಶಾಲಾ ವಿದ್ಯಾರ್ಥಿಗಳು ಮಣ್ಣಿನ ದೀಪ( ಹಣತೆ) ಗಳನ್ನು ಹಚ್ಚಿ ಸಂಭ್ರಮಿಸಿದರು.
ವಿದ್ಯಾರ್ಥಿಗಳು ಹಸಿರು ಪಟಾಕಿ ಆಚರಿಸುವ ಕುರಿತು ಪರಿಸರ
ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಹಸಿರು ದೀಪಾವಳಿ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿ
ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ
ರಾಷ್ಟ್ರೀಯ ಹಸಿರು ಪಡೆಯ ಕೊಡಗು ಜಿಲ್ಲಾ ನೋಡಲ್ ಅಧಿಕಾರಿಯೂ ಶಾಲಾ ಮುಖ್ಯೋಪಾಧ್ಯಾಯ
ಟಿ.ಜಿ.ಪ್ರೇಮಕುಮಾರ್‌, ಪಟಾಕಿ ಸಿಡಿಸುವುದರಿಂದ ಹಣದ ದುಂದುವೆಚ್ಚದ ಜತೆಗೆ ಪರಿಸರ ಮತ್ತು ಆರೋಗ್ಯಕ್ಕೆ ಹಾನಿ, ವಾಯುಮಾಲಿನ್ಯ, ಶಬ್ದ ಮಾಲಿನ್ಯದ ಜತೆಗೆ ಹಾನಿಕಾರಕವಾದ ಅಂಧತ್ವದ ಅಪಾಯಗಳನ್ನು ಸೃಷ್ಟಿಸುವ ಮಾಲಿನ್ಯಕಾರಿ
ಪಟಾಕಿಯನ್ನು ಬಿಟ್ಟು ದೀಪಾವಳಿ ಆಚರಿಸಲು ವಿದ್ಯಾರ್ಥಿಗಳು ಕಂಕಣಬದ್ಧರಾಗಬೇಕಿದೆ ಎಂದರು.
ಜಿಲ್ಲೆಯಲ್ಲಿ ಕಳೆದ 12 ವರ್ಷಗಳಿಂದ ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲಾಗುತ್ತಿದೆ ಎಂದರು.
ಪಟಾಕಿ ಸಿಡಿತದಿಂದ ವಿವಿಧ
ಕಾಯಿಲೆ, ಕ್ಯಾನ್ಸರ್‌ ಕಾಯಿಲೆ ಸೇರಿದಂತೆ ವಿಷಕಾರಿ ಅನಿಲ ಬಿಡುಗಡೆಗೊಂಡು ಪಕ್ಷಿ-ಪ್ರಾಣಿ ಜೀವ ಸಂಕುಲಕ್ಕೆ ತೊಂದರೆಯಾಗುತ್ತದೆ ಎಂದು ಪ್ರೇಮಕುಮಾರ್
ಹೇಳಿದರು.
ಹಸಿರು
ದೀಪಾವಳಿ ಹಬ್ಬದ ಸಂದರ್ಭ
ಹಣತೆ( ದೀಪ) ಬೆಳಗಿಸುವ ಮೂಲಕ
ವಿದ್ಯಾರ್ಥಿಗಳಲ್ಲಿ ಮಾಲಿನ್ಯಕಾರಿ
ಪಟಾಕಿ ಸಿಡಿತ
ಪರಿಸರಕ್ಕೆ ಪೂರಕವಾಗಿ
ಪರಿಸರ ಸ್ನೇಹಿ
ಹಸಿರು ಪಟಾಕಿಯನ್ನು ಸಿಡಿಸುವ ಮೂಲಕ ಮಾಲಿನ್ಯಮುಕ್ತ ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕಿದೆ.
ನಾವು ಪ್ರಕೃತಿಗೆ ಯಾವುದೇ ಮಾಲಿನ್ಯವನ್ನುಂಟು
ಮಾಡದೇ ಉತ್ತಮ ಪರಿಸರ ಸಂರಕ್ಷಣೆಗೆ ಪಣತೊಡಬೇಕು ಎಂದರು.
ಕೊಡಗಿನಲ್ಲಿ ಕಳೆದ 12 ವರ್ಷಗಳಿಂದ ಶಾಲೆಗಳಲ್ಲಿ
ಹಸಿರು ದೀಪಾವಳಿ ಆಚರಿಸುವ ಮೂಲಕ ಮಕ್ಕಳಲ್ಲಿ ಮಾಲಿನ್ಯ ಮುಕ್ತ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸರ್ಕಾರದ ನಿರ್ದೇಶನದಂತೆ ಹಸಿರು ದೀಪಾವಳಿ ಆಚರಣೆ ಕುರಿತು ಜಾಗೃತಿ ಮೂಡಿಸುತ್ತಿದ್ದು, ಮಾಲಿನ್ಯಕಾರಿ
ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತ ಹಾಗೂ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಶಾಲೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಹಸಿರು ಪಟಾಕಿಗಳ ಕುರಿತು ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ‌ ಮಾತನಾಡಿ ಮಾಹಿತಿ‌ ನೀಡಿದರು.
ಹಸಿರು ದೀಪಾವಳಿ ಆಚರಣೆಗೆ
ಎಸ್.ಡಿ.ಎಂ.ಸಿ.ಅಧ್ಯಕ್ಷ ಎಸ್.ಎನ್. ಪುಟ್ಟಸ್ವಾಮಿ ಚಾಲನೆ ನೀಡಿದರು.
ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಮಾತನಾಡಿದರು. ಶಿಕ್ಷಕಿಯರಾದ ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಸರಸ್ವತಿ ಇದ್ದರು.
ಜಾಗೃತಿ ಅಭಿಯಾನ:
ನಂತರ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು
ಹಣತೆ ಹಚ್ಚೋಣ,
ಹಸಿರು ದೀಪಾವಳಿ ಆಚರಿಸೋಣ,
ಮಾಲಿನ್ಯಕಾರಿ
ಪಟಾಕಿ ತ್ಯಜಿಸೋಣ
ಮಾಲಿನ್ಯ ತಡೆಯೋಣ,
ಮಾಲಿನ್ಯ ಮುಕ್ತ ದೀಪಾವಳಿ ಆಚರಿಸೋಣ ಬನ್ನಿ ಎಂಬಿತ್ಯಾದಿ ಘೋಷಣೆಗಳ ಭಿತ್ತಿ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಜನರಲ್ಲಿ ಹಸಿರು ದೀಪಾವಳಿ ಆಚರಿಸುವಂತೆ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಿದರು. ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದರೊಂದಿಗೆ ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತ, ಮಾಲಿನ್ಯ ಹಾಗೂ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಶಿಕ್ಷಕರು ಮಾಹಿತಿ ನೀಡಿದರು.

‘ಹಣತೆ ಹಚ್ಚೋಣ ಬನ್ನಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ ಬನ್ನಿ’, ‘ಹಣತೆ ಬೆಳಗಿಸಿ- ದೀಪಾವಳಿ ಆಚರಿಸಿ ”
ಎಂಬ ಪರಿಸರ ಘೋಷಣೆಗಳನ್ನು ಪ್ರಚುರಪಡಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!