ಕಾರ್ಯಕ್ರಮ

ಸೋಮವಾರಪೇಟೆ, ಕುಶಾಲನಗರ ತಾಲೂಕು ಮಟ್ಟದ ಬಿಜೆಪಿ ಎಸ್.ಟಿ. ಮೋರ್ಚಾ ಸಭೆ

ಕುಶಾಲನಗರ, ಅ 22: ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು ಮಟ್ಟದಬಿ ಜೆ ಪಿ ಎಸ್. ಟಿ ಮೋರ್ಚಾದ ಸಭೆ ಕುಶಾಲನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರಪೇಟೆ ತಾಲ್ಲೂಕು ಬಿ ಜೆ ಪಿ ಮಂಡಲ ಅಧ್ಯಕ್ಷರಾದ ಮನುಕುಮಾರ್ ರೈ ನೆರವೇರಿಸಿ ಮಾತನಾಡಿದರು. ಸರಕಾರವು ಈಗಾಗಲೇ ಮೀಸಲಾತಿಯ ಅನುಪಾತವನ್ನು ಹೆಚ್ಚಿಸಿರುವುದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಸಮುದಾಯದ ವರ್ಗದವರು ಸ್ಧಾನವನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರ ಮೂಲಕ ಎಸ್ ಟಿ ವಿಭಾಗದ ಸಮುದಾಯದವರು ಪಕ್ಷ ಸರಕಾರದ ಉದ್ದೇಶಗಳನ್ನು ಅರಿತುಕೊಂಡು ಸಂಘಟನಾತ್ಮಕವಾಗಿ ಸಾಗಲು ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಎಸ್ ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಮಾತನಾಡಿ, ಸರಕಾರವು ಎಸ್ ಸಿ ಮತ್ತು ಎಸ್‌ ಟಿ ಜನಾಂಗದವರಿಗೆ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಸಾಲ ಸೌಲಭ್ಯಗಳ ಜೊತೆಯಲ್ಲಿ ಗಿರಿಜನ ಅಭಿವೃದ್ಧಿ ವಿಶೇಷ ಯೋಜನೆಗಳ ಅಡಿಯಲ್ಲಿ ಹೈನುಗಾರಿಕೆ ಮತ್ತು ಹಾಡಿಯ ಜನರಿಗೆ ವಿವಿಧ ಸವಲತ್ತುಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಪೂಕರವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ನವರ ಪ್ರಯತ್ನದಲ್ಲಿ ಎರಡೂ ತಾಲೂಕಿನಲ್ಲಿ ಸಾವಿರಾರು ಎಸ್ ಟಿ ಕುಟುಂಬದವರು ಮೂರು ಇಲಾಖೆಯ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲ್ಲೂಕು ಎಸ್ ಟಿ ಮೋರ್ಚಾದ ಅಧ್ಯಕ್ಷ ರವಿ ವಹಿಸಿ ಮಾತಾನಾಡಿದರು.
ಈ ಸಂದರ್ಭದಲ್ಲಿ ಎಸ್ ಟಿ ರಾಜ್ಯ ಸಮಿತಿಯ ಸದಸ್ಯ ಬಿ ಕೆ ಮೋಹನ್, ಜೇನು ಕುರುಬ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಕಾಶ್, ಬಿ ಜೆ ಪಿ ಎಸ್ ಟಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ , ರೈತ ಮೋರ್ಚಾ ಅಧ್ಯಕ್ಷ ಜಗದೀಶ್, ತಾಲ್ಲೂಕು ಎಸ್ ಟಿ ಮೋರ್ಚಾದ ಕಾರ್ಯದರ್ಶಿ ನಾಗೇಶ್, ಉಪಾಧ್ಯಕ್ಷ ಮಲ್ಲೇಶ್, ಸೋಲಿಗರ ಸಮಿತಿಯ ತಾಲ್ಲೂಕು ಅಧ್ಯಕ್ಷ ಕುಮಾರ್, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯೆ ಉಮಾ, ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಕೆ ಆರ್, ಕುಮಾರ್, ಹೊಸಕೋಟೆ ಗ್ರಾಪಂ ಸದಸ್ಯೆ ಸೀತೆ, ಸೇರಿದಂತೆ ಜಿಲ್ಲಾ ಘಟಕದ ಸದಸ್ಯರಾದ ಚಿಕ್ಕಯ್ಯ ಪುಟ್ಟಸ್ವಾಮಿ, ಲೋಕೇಶ್ ಸೇರಿದಂತೆ ಎಸ್‌ ಟಿ ಸಮುದಾಯದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು ಸಮುದಾಯ ಬಾಂಧವರು ಭಾಗವಹಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!